ಎಡನೀರು ಮಠ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ತೃತೀಯ ಚಾತುರ್ಮಾಸ್ಯ ವ್ರತಾಚರಣೆ ಪ್ರಯುಕ್ತ ರಾಷ್ಟ್ರದೇವೋಭವ ಖ್ಯಾತಿಯ ಮಂಗಳೂರಿನ ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಇವರ ಶಿಷ್ಯ ವೃಂದದವರಿಂದ ಭರತನಾಟ್ಯ ಜಾನಪದ ನೃತ್ಯ ಮತ್ತು ದೇಶ ಭಕ್ತಿಯ ನೃತ್ಯ ವೈವಿಧ್ಯ ‘ಸನಾತನ ನೃತ್ಯಾಂಜಲಿ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ನಂತರ ನೃತ್ಯತಂಡಕ್ಕೆ ಶ್ರೀಗಳು ಮಂತ್ರಾಕ್ಷತೆಯನ್ನಿತ್ತು ಹರಸಿದರು. Watch full Program
Read More
ಮಂಗಳೂರು: ವ್ಯಕ್ತಿಯ ಜೀವನಕ್ಕೊಂದು ಸರಿಯಾದ ಸಂಸ್ಕಾರವು ನೃತ್ಯಕಲೆಯಿಂದ ದೊರಕುತ್ತದೆ. ಹಾಗೆ ನೋಡಿದರೆ ಒಂದೊಂದು ಕಲೆಯು ಆತನ ಸಂಸ್ಕಾರದಿಂದಲೇ ಪ್ರಾಪ್ತವಾಗುವುದು ಸಾಧ್ಯ ಎಂದು ಹಿರಿಯ ಯಕ್ಷಗಾನ ಕಲಾವಿದರಾದ ಸೂರಿಕುಮೇರು ಗೋವಿಂದ ಭಟ್ ಹೇಳಿದರು. ಅವರು ಭಾನುವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸನಾತನ ನಾಟ್ಯಾಲಯದ ವತಿಯಿಂದ ನಡೆದ ಸನಾತನ ಗುರುಪರಂಪರೆ ಕಾರ್ಯಕ್ರಮದಲ್ಲಿ ಗುರುನಮನ ಸ್ವೀಕರಿಸಿ ಮಾತನಾಡಿದರು. ಲಲಿತ ವಿದ್ಯೆಯನ್ನು ಸ್ವೀಕರಿಸಲು ಪೂರ್ವ ಸಂಸ್ಕಾರ ಬೇಕು. ಸತ್ಯದ ಸಾಕ್ಷಾತ್ಕಾರವೇ ವಿದ್ಯೆಯ ಪರಮ ಲಕ್ಷ್ಯ. ಕೇಳುಗನಿಗೆ ನೋಡುಗನಿಗೆ ಏನನ್ನು ಕೊಡಬೇಕು ಎಂಬುದನ್ನು […]
Read More
Students of Sanathana Natyalaya, Mangalore performed at Yuva Nrithyothsava- 2023 organised by Nrityaangan, Mangalore on 11th June 2023 at Don Bosco Hall.
Read More
‘ಪೋಷಕರನ್ನು ಗೌರವಿಸುವುದೇ ಮಕ್ಕಳು ಕೊಡಬಹುದಾದ ಕೊಡುಗೆ’ ಮಂಗಳೂರು: ಮಕ್ಕಳಿಗೆ ರೂಪ, ವಿದ್ಯೆ, ಆಶ್ರಯ ಮತ್ತು ಸಂಸ್ಕಾರವನ್ನು ಕೊಟ್ಟು ಬೆಳೆಸುವ ತಂದೆ ತಾಯಿಗೆ ಪ್ರತಿಯಾಗಿ ಮಕ್ಕಳು ಸಂಸ್ಕಾರ ಪಥದ ಜೀವನ ನಡೆಸಿದರೆ ಅದುವೇ ಅವರು ಅಪ್ಪ ಅಮ್ಮನಿಗೆ ಕೊಡುವ ಗೌರವವಾಗಿದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು. ಅವರು ಗುರುವಾರ ನಗರ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸನಾತನ ನಾಟ್ಯಾಲಯದ ವತಿಯಿಂದ ಕಲಾಸಾಧಕ ಸ್ವರುಣ್‌ರಾಜ್ ಸಂಸ್ಮರಣೆಯ 10ನೇ ವರ್ಷದ ಕಾರ್ಯಕ್ರಮದಲ್ಲಿ ರಾಷ್ಟ್ರ ಧರ್ಮ ಮತ್ತು ಧರ್ಮಜಾಗೃತಿ ಸಂದೇಶ ನೀಡಿದರು. […]
Read More
A body conditioning workshop for dancers by Gautam Marathe held at Sanatana Natyalaya, Mangaluru.
Read More
ಮಂಗಳೂರು: ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸನಾತನ ನಾಟ್ಯಾಲಯದ 40ನೇ ವರ್ಷಾಚರಣೆಯ ಅಂಗವಾಗಿ ದಿನಾಂಕ 09-04-2023 ಭಾನುವಾರದಂದು ನಡೆದ ಕಾರ್ಯಕ್ರಮವನ್ನು ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಶೆಟ್ಟಿ, ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್, ಸಂಸ್ಕಾರ ಭಾರತಿಯ ಪ್ರಾಂತ ಕಾರ್ಯದರ್ಶಿಗಳಾದ ನಾಗರಾಜ್ ಶೆಟ್ಟಿ ಮತ್ತು ಶ್ರೀದೇವಿ ಭಜನಾ ಮಂದಿರದ ಸಂತೋಷ್ ಶೆಟ್ಟಿ ಎಲ್ಲರೂ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಿದರು. ಆ ಕೂಡಲೇ ಮೂಡುಶೆಡ್ಡೆಯ ಶ್ರೀದೇವಿ ಭಜನಾಮಂದಿರದ ಸದಸ್ಯರಿಂದ ಭಕ್ತಿ ಭಾವವನ್ನು ಜಾಗೃತಗೊಳಿಸುವ […]
Read More
ʼತಾಯಿ ಭಾರತಿ ವಿಶ್ವಭಾರತಿಯಾಗಬೇಕುʼ ಮಂಗಳೂರು: ಭಾರತವು ವಿಶ್ವಗುರುವಾಗಬೇಕು ಎಂಬುದು ಎಲ್ಲರ ಕನಸು ನಿಜ. ಆದರೆ ತಾಯಿ ಭಾರತಿಯು ಇಡೀ ವಿಶ್ವದ ತಾಯಿಯಾಗಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ತಮ್ಮ ಶ್ರೀಮಂತ ಪರಂಪರೆಯನ್ನು ಅರಿತುಕೊಂಡು ಆತ್ಮವಿಶ್ವಾಸದಿಂದ ಜೀವನ ನಡೆಸಬೇಕು ಎಂದು ಬಾಲ ವಾಗ್ಮಿ , ಬೆಂಗಳೂರಿನ ಹಾರಿಕಾ ಮಂಜುನಾಥ್ ಹೇಳಿದರು. ಅವರು ಭಾನುವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸನಾತನ ನಾಟ್ಯಾಲಯದ 40ನೇ ವರ್ಷಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ –ರಾಷ್ಟ್ರಧರ್ಮ ಜಾಗೃತಿ ಸಂದೇಶʼ ನೀಡಿದರು. ಸ್ವಾಮಿ ವಿವೇಕಾನಂದರಂತಹ […]
Read More
05 ಏಪ್ರಿಲ್ 2023, ಮಂಗಳೂರು: ಸನಾತನ ನಾಟ್ಯಾಲಯ, ಮಂಗಳೂರು ಇದರ 40ನೇ ವರ್ಷಾಚರಣೆ ಪ್ರಯುಕ್ತ ದಿನಾಂಕ 09-04-2023 ಭಾನುವಾರ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಈ ಕೆಳಗಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಂಜೆ 5-30ಕ್ಕೆ ಶ್ರೀ ದೇವಿ ಭಜನಾ ಮಂದಿರ ಮೂಡುಶೆಡ್ಡೆ ಇವರಿಂದ “ಕುಣಿತ ಭಜನೆ”, 6-15ಕ್ಕೆ ಬಾಲ ವಾಗ್ಮಿ ಹಾರಿಕಾ ಮಂಜುನಾಥ್ ಬೆಂಗಳೂರು ಇವರಿಂದ “ರಾಷ್ಟ್ರ-ಧರ್ಮ ಜಾಗೃತಿ ಸಂದೇಶ” ಹಾಗೂ 7-00ಕ್ಕೆ ನಲ್ವತ್ತರ ಸಂಭ್ರಮದ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭಾರತನಾಟ್ಯ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ. ಕಲಾಭಿಮಾನಿಗಳಿಗೆ ಈ […]
Read More
Nritya Vahini 2nd edition – A live Duet performance by Vidwan Roshan Poojary and Vidushi Maithri P R. held at Townhall Mangalore on 2nd April 2023.
Read More
2023 ರ ಫೆಬ್ರವರಿ 18 ರಂದು ಕರ್ನಾಟಕ ಬ್ಯಾಂಕ್ ಶತಮಾನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಕೆ. ವಿ. ರಮಣ್ ಮಂಗಳೂರು ಪರಿಕಲ್ಪನೆ – ಸಾಹಿತ್ಯದ “ಸಹ ಯಾನದ ಮಾನ ” – ಶತಮಾನ ಗೀತೆಯನ್ನು ನೃತ್ಯ ಪ್ರದರ್ಶನದ ಮೂಲಕ ಸನಾತನ ನಾಟ್ಯಾಲಯದ ವಿದ್ಯಾರ್ಥಿನಿಯರು ಲೋಕಾರ್ಪಣೆ ಮಾಡಿದರು. ವ್ಯಾಪಕ ಮೆಚ್ಚುಗೆ ಗಳಿಸಿದ ಈ ಸಾಹಿತ್ಯ- ಸಂಗೀತ ಸಂಭ್ರಮವು ನೃತ್ಯದೊಂದಿಗೆ ಮುಪ್ಪುರಿಗೊಂಡಿತು. ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದ ಮಣಿಶೇಖರ್ ಶಿಷ್ಯರು, ವಿದುಷಿ ಶ್ರೀಲತಾ ನಾಗರಾಜ್ ಸಂಯೋಜನೆಯಲ್ಲಿ ನರ್ತಿಸಿದರು. ಚಂದ್ರಶೇಖರ್ ಕೆ. ಶೆಟ್ಟಿ ಸಹಕರಿಸಿದರು.
Read More