Sanathana Natyalaya

ಮಂಗಳೂರಿನ ಭಾರತೀಯ ಕೋಸ್ಟ್‌ ಗಾರ್ಡ್‌ನಲ್ಲಿ ದೇಶಭಕ್ತಿ ಗೀತೆಯ ನೃತ್ಯ ಕಾರ್ಯಕ್ರಮ

ಫೆಬ್ರವರಿ 1 , 2023 ರಂದು ಕರ್ನಾಟಕದ ಮಾನ್ಯ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋತ್‌ ಅವರು ಮಂಗಳೂರಿನಲ್ಲಿರುವ Indian coast gaurd ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಅವರ ಶಿಷ್ಯ ವೃಂದದವರು ವೈವಿಧ್ಯಮಯ ಶಾಸ್ತ್ರೀಯ ಜಾನಪದ ಮತ್ತು ದೇಶಭಕ್ತಿ ಗೀತೆಯ ನೃತ್ಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು.

Read More

ಚಂದ್ರಶೇಖರ್ ಕೆ. ಶೆಟ್ಟಿ ಅವರಿಗೆ ‘ತುಳುನಾಡ ಸುಶಾಸನ ಅಮೃತ ಭಾರತಿ’ ಪುರಸ್ಕಾರ

Chandrashekhar Shetty, Director of Sanathana Natyalaya conferred with Tulunada Sushaasana Amritha Bharathi Award at this program. ಮಂಗಳೂರು: ‘ಹಲವು ವರ್ಷಗಳಿಂದ ಕಾಶ್ಮೀರವು ರಕ್ತದಿಂದ ರಂಜಿತವಾಗಿತ್ತು. ಈಗ ಅದು ಕುಂಕುಮದಂತೆ ಶೋಭಿ ಸುತ್ತಿದೆ. ಕಾಶ್ಮೀರ ಎಂದಿಗೂ ದೇಶದ ಸಿಂಧೂರ’ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಸುಶಾಸನ ಸಮಿತಿ ವತಿಯಿಂದ ಏರ್ಪಡಿಸಿದ್ದ ‘ಕಾಶ್ಮೀರ ವಿಜಯ’ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ‘ದೇಶ ಭಕ್ತಿ ಯಾವತ್ತೂ ಜಾಗೃತವಾಗಿರಬೇಕು. ದೇಶಭಕ್ತಿ ಮೂಡಿಸಲು […]

Read More

ರಾಷ್ಟ್ರಧರ್ಮ ಜಾಗೃತಿ ಉಪನ್ಯಾಸ ತಾಗ-ಸೇವೆಯೇ ಧರ್ಮ: ಪ್ರಭಾಕರ ಭಟ್

ಮಂಗಳೂರು: ಸನಾತನ ನಾಟ್ಯಾಲಯದ 40 ನೇ ವರ್ಷಾಚರಣೆಯ ಶುಭಾರಂಭವು ಜನವರಿ 14 ರಂದು ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ನಡೆಯಿತು. ನಮ್ಮ ಸುತ್ತಲಿರುವ ಎಲ್ಲಾ ವಸ್ತುಗಳಲ್ಲಿಯೂ ದೇವರನ್ನು ನೋಡುವ ಕಲ್ಪನೆ ಭಾರತದ್ದು, ಕಲ್ಲು, ಮಣ್ಣು, ಮರ, ಪ್ರಾಣಿಗಳಲ್ಲಿಯೂ ದೇವರನ್ನು ಕಾಣುವ ಪ್ರವೃತ್ತಿ ಭಾರತೀಯರದ್ದು, ಇದು ಪ್ರಕೃತಿಗೆ ಪೂರಕವಾದ ವಿಚಾರವಾಗಿದೆ ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ನಗರದ ಕುದ್ದುಲ್ ಪುರಭವನದಲ್ಲಿ ಸನಾತನ ನಾಟ್ಯಾಲಯದ 40ನೇ ವರ್ಷಾಚರಣೆಯ ಕಾಠ್ಯಕ್ರಮದಲ್ಲಿ ಭಾನುವಾರ ರಾಷ್ಟ್ರಧರ್ಮ […]

Read More

ಸನಾತನ ನಾಟ್ಯಾಲಯ – 40 ವರ್ಷದ ಸಂಭ್ರಮ ಉದ್ಘಾಟನೆ

ಮಂಗಳೂರು: ಜೀವನದಲ್ಲಿ ಸಂಸ್ಕಾರ ಇದ್ದರೆ ಮಾತ್ರ ನಾವು ಪರಿಪೂರ್ಣವಾಗಿ ಬದುಕಲು ಸಾಧ್ಯ. ಭಾರತದಲ್ಲಿ ಕಲಾ‌ ಪ್ರಕಾರಗಳು ಜೀವನಕ್ಕೆ ಅಗತ್ಯ ಸಂಸ್ಕಾರಗಳನ್ನು ಕೊಡಬಲ್ಲವು ಎಂದು ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಹೇಳಿದರು. ಅವರು ಶನಿವಾರ ನಗರದ ಕುದ್ಮುಲ್ ಪುರಭವನದಲ್ಲಿ ಸನಾತನ ನಾಟ್ಯಾಲಯದ 40 ನೇ ವರ್ಷಾಚರಣೆಯ ಮೊದಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶೇಣಿ ಮುರಳಿ ಅವರಿಂದ ಶ್ರೀಹರಿದರ್ಶನ ಎಂಬ ಹರಿಕತೆ, ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಸನಾತನ ನಾಟ್ಯಾಲಯದ ನೃತ್ಯಗುರು ವಿದುಷಿ ಶಾರದಾಮಣಿಶೇಖರ್, […]

Read More

ನೃತ್ಯ ವಾಹಿನಿ

ಮಂಗಳೂರಿನ ಸನಾತನ ನಾಟ್ಯಾಲಯ ಮತ್ತು ನೃತ್ಯಾಂಗನ್ ಸಂಸ್ಥೆ ಜಂಟಿಯಾಗಿ ನೃತ್ಯ ವಾಹಿನಿ ಎಂಬ ಕಾರ್ಯಕ್ರಮವು ನವೆಂಬರ್ 5 ರಂದು ಶನಿವಾರ ಸಂಜೆ 5.45 ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ನಾಟ್ಯಂಜಲಿ ಕಲಾ ಅಕಾಡೆಮಿ, ಸುರತ್ಕಲ್ ಇದರ ನೃತ್ಯ ಗುರು ಕರ್ನಾಟಕ ಕಲಾಶ್ರೀ ವಿದ್ವಾನ್ ಚಂದ್ರಶೇಖರ ನಾವಡ ಇವರ ಶಿಷ್ಯೆಯರಾದ ಕುಮಾರಿ ನಂದಿತಾ ಆಚಾರ್ ಮತ್ತು ವಿಧಿಶ ಬೈಕಂಪಾಡಿ ಯುಗಳ ನೃತ್ಯ ಪ್ರದರ್ಶನ ನೀಡಿದರು. ಬೆಂಗಳೂರಿನ ಅರುಣ ಭಾರ್ಗವಿ ಅವರಿಂದ ಏಕಾರ್ಥ […]

Read More

Testimonials

Sanathana Natyalaya is much more than just a dance school for many. It is a home, a community, a group of people that want to support each other unconditionally to...

Shalmalee Ghate