
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಶಾಂತಿವನ ಟ್ರಸ್ಟ್ ಎಸ್‌ಡಿಎಂ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಶನಿವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಜರುಗಿದ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಲೋಕಾರ್ಪಣೆ ಮತ್ತು ಅಂಚೆ-ಕುಂಚ ವಿಜೇತರ ಪುರಸ್ಕಾರ ಸಮಾರಂಭದಲ್ಲಿ ಮಂಗಳೂರು ಸನಾತನ ನಾಟ್ಯಾಲಯದವರಿಂದ ಗಾಯನ- ನೃತ್ಯ ಹಾಗೂ ರಾಷ್ಟ್ರೀಯ ಕಲಾವಿದ ಶಾಂತಯ್ಯ ಪರಡಿಮಠ ದಾವಣಗೆರೆ ಅವರಿಂದ ಕುಂಚ ಕಾರ್ಯಕ್ರಮ ಜರುಗಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು. […]
Sanathana Natyalaya, mangalore feels blessed and happy to announce that our team performed dance drama Shabari (Devotee of Lord Srirama) composed by Sediyaapu Krishna Bhat on 22nd January, Monday 8.30 pm at Kateel Durga parameshwari temple on the divine occasion of Sri Ramothsava.
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಉಡುಪಿಯ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ನಡಯುತ್ತಿರುವ ಶ್ರೀ ರಾಮದೇವರ 48 ದಿನಗಳ ಮಂಡಲ ಉತ್ಸವದ ಅಷ್ಟಾವಧಾನದಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಇವರ 16 ಶಿಷ್ಯಂದಿರಾದ ವಿದುಷಿ ಶಿಫಾಲಿ, ವಿದುಷಿ ನೇಹಾ, ವಿದುಷಿ ಕೃಪಾ, ಸಿಂಚನ ಕುಲಾಲ್, ವೈಷ್ಣವಿ ತಂತ್ರಿ, ಜಾನವಿ ಶೇಖ, ಸಾನ್ವಿ ಶೇಖ, ಅಮೃತ, ಜೀವಿತ ಸನಿಲ್, ನೇಹಾ ರಾವ್, […]
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 11-03-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಮಂಗಳೂರಿನ ಕುಮಾರಿ ಶ್ರೀಕರೀ ಮಂಗಳೂರು ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಶ್ರೀಕರೀಯು ಹೊಸಬೆಟ್ಟು ರಾಮದಾಸ್ ಹೆಚ್. ಮತ್ತು ಶ್ರೀಲತಾ ಅವರ ಜೇಷ್ಠ ಪುತ್ರಿ. ಮಂಗಳೂರಿನ ಸನಾತನ […]
ಮಂಗಳೂರಿನ ಸನಾತನ ನಾಟ್ಯಾಲಯ ಮತ್ತು ನೃತ್ಯಾಂಗನ್ ಪ್ರಸ್ತುತಪಡಿಸುವ “ನೃತ್ಯವಾಹಿನಿ” 2024 ರ 3ನೇ ಆವೃತ್ತಿ ಭರತನಾಟ್ಯ ಕಾರ್ಯಕ್ರಮವು ಮಾರ್ಚ್ 10 ಭಾನುವಾರ ಸಂಜೆ 5:15ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಕರ್ನಾಟಕ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಡಿಜಿಎಂ ಶ್ರೀಯುತ ವಸಂತ ಆರ್ ಹೇರ್ಲೆ ದೀಪ ಬೆಳಗಿಸಿ ಉದ್ಘಾಟಿಸಿದರು. ಮಂಗಳೂರಿನ ಗಾನ ನೃತ್ಯ ಅಕಾಡೆಮಿಯ ನಾಟ್ಯ ವಿದುಷಿ ಅಂಕಿತಾ ರೈ, ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದುಷಿ ಅಪೂರ್ವ ಗೌರಿ ಡಿ, ಮಂಗಳೂರಿನ ಸನಾತನ […]
ಮಂಗಳೂರು: ಸಾಹಿತ್ಯ ಕ್ಷೇತ್ರದಲ್ಲಿ ಅಮೃತ ಸೋಮೇಶ್ವರ ಅವರು ಮಾಡಿದ ಸಂಶೋಧನೆಗಳು ಅಪೂರ್ವವಾದುದು. ಯಕ್ಷಗಾನ ಕ್ಷೇತ್ರದಲ್ಲಿ ಅವರು ತಮ್ಮ ಹೊಸ ದೃಷ್ಟಿಕೋನದಿಂದ ಸಂಶೋಧಾನತ್ಮಕ ಕೃತಿಗಳನ್ನು ಬರೆದಿದ್ದಾರೆ. ಅವರು ಸಾಗಿದ ಹಾದಿ ಕಿರಿಯರಿಗೆ ಮಾದರಿ ಎಂದು ಯಕ್ಷಗಾನ ವಿದ್ವಾಂಸ ಎಂ. ಪ್ರಭಾಕರ ಜೋಷಿ ಹೇಳಿದರು. ಇತ್ತೀಚೆಗೆ ಅಗಲಿದ ಹಿರಿಯ ಸಾಹಿತಿ ಡಾ. ಅಮೃತ ಸೋಮೇಶ್ವರ ಮತ್ತು ಸಂಗೀತ ವಿದುಷಿ ಶೀಲಾ ದಿವಾಕರ್ ಅವರಿಗೆ ಸನಾತನ ನಾಟ್ಯಾಲಯದ ವತಿಯಿಂದ ನಗರ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ನುಡಿನಮನ ಅರ್ಪಿಸಿದರು. ವಿದ್ವಾಂಸರು, […]
ಮೂಡುಬಿದಿರೆ ಕೋ-ಆಪರೇಟಿವ್ ಸರ್ವಿಸ್ ಸೊಸೈಟಿ ಲಿಮಿಟೆಡ್‌ನ 70 ನೇ ಅಖಿಲ ಭಾರತ ಸಹಕಾರ ಸಪ್ತಾಹ 2023 ಅಂಗವಾಗಿ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಸನಾತನ ರಾಷ್ಟ್ರಾಂಜಲಿ ಕಾರ್ಯಕ್ರಮ ನಡೆಯಿತು.
ಈಜಿ ಆಯುರ್ವೇದ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಸನಾತನ ನೃತ್ಯಾಂಜಲಿ ಕಾರ್ಯಕ್ರಮ ನಡೆಯಿತು.
ಮಂಗಲ್ಪಾಡಿಯಲ್ಲಿ ಏಕಾಹ ಭಜನಾ ಮಂದಿರದಲ್ಲಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಪ್ರಯುಕ್ತ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಪುಣ್ಯಭೂಮಿ ಭಾರತ ಕಾರ್ಯಕ್ರಮ ನಡೆಯಿತು.