ಮಂಗಳೂರು: ಸನಾತನ ನಾಟ್ಯಾಲಯದ 40 ನೇ ವರ್ಷಾಚರಣೆಯ ಶುಭಾರಂಭವು ಜನವರಿ 14 ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ನಮ್ಮ ಸುತ್ತಲಿರುವ ಎಲ್ಲಾ ವಸ್ತುಗಳಲ್ಲಿಯೂ ದೇವರನ್ನು ನೋಡುವ ಕಲ್ಪನೆ ಭಾರತದ್ದು, ಕಲ್ಲು, ಮಣ್ಣು, ಮರ, ಪ್ರಾಣಿಗಳಲ್ಲಿಯೂ ದೇವರನ್ನು ಕಾಣುವ ಪ್ರವೃತ್ತಿ ಭಾರತೀಯರದ್ದು, ಇದು ಪ್ರಕೃತಿಗೆ ಪೂರಕವಾದ ವಿಚಾರವಾಗಿದೆ ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ನಗರದ ಕುದ್ದುಲ್ ಪುರಭವನದಲ್ಲಿ ಸನಾತನ ನಾಟ್ಯಾಲಯದ 40ನೇ ವರ್ಷಾಚರಣೆಯ ಕಾಠ್ಯಕ್ರಮದಲ್ಲಿ ಭಾನುವಾರ ರಾಷ್ಟ್ರಧರ್ಮ ಜಾಗೃತಿ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಮರಗಳೂ ನಮ್ಮ ಜೀವನಕ್ಕೆ ಎಷ್ಟು ಅಗತ್ಯ ಎಂಬುದನ್ನು ವಿಜ್ಞಾನ ಹೇಳುತ್ತದೆ. ನಮ್ಮ ಧರ್ಮವೂ ಸಾವಿರಾರು ವರ್ಷಗಳ ಹಿಂದೆಯೇ ಇದನ್ನು ಹೇಳಿದೆ. ಪ್ರತಿಯೊಂದು ದೇಶಕ್ಕೂ ಒಂದು ಆತ್ಮವಿದೆ. ಅಮೆರಿಕದವರುಸೈನ್ಯವನ್ನು ಸಿದ್ಧಪಡಿಸುವ ಆಸಕ್ತಿ, ಚೀನಾಕ್ಕೆ ಆಕ್ರಮಣಕಾರಿ ಪ್ರವೃತ್ತಿಯಿದೆ. ಆದರೆ ಭಾರತದ ಆತ್ಮವಿರುವುದು ಧರ್ಮದಲ್ಲಿ ಧರ್ಮವೇ ನಮ್ಮ ಉಸಿರಾಗಿದೆ. ರಾಜಕೀಯ ವ್ಯವಸ್ಥೆಗಳು ಬದಲಾದರೂ, ಧರ್ಮವು ನಾಶವಾದರೆ ಭಾರತವು ಉಳಿಯುವುದಿಲ್ಲ. ಹಾಗೆಂದ ಮಾತ್ರ ಧರ್ಮವೆಂದರೆ ನಾವು ಅನುಸರಿಸುವ ಮತವಲ್ಲ ಬದಲಾಗಿ ತ್ಯಾಗ ಮತ್ತು ಸೇವೆಯೇ ನಮ್ಮ ಧರ್ಮವಾಗಿದೆ. ವಿವೇಕಾನಂದರು ಕೂಡ ಇದೇ ವಿಚಾರವನ್ನು ಮಂಡಿಸಿದ್ದರು ಎಂದು ವಿವರಿಸಿದರು.
ಈ ಸಂದರ್ಭ ಹೊಸಬೆಟ್ಟು ಬಾಲವಿಕಾಸ ಮಂಡಳಿಯಿಂದ ಕುಣಿತ ಭಜನೆ ನಡೆಯಿತು. ಬಳಿಕ, ಸನಾತನ ನಾಟ್ಯಾಲಯದ ಹಿರಿಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನಗೊಂಡಿತು. ಸೇಡಿಯಾಪು ಕೃಷ್ಣಭಟ್ಟರ ಸಾಹಿತ್ಯಕ್ಕೆ ಉದ್ಯಾವರ ಮಾಧವ ಆಚಾರ್ಯ ಅವರು ನಿರ್ದೇಶನ ಮಾಡಿದ ‘ಪುಣ್ಯಲಹರಿ’ ಎಂಬ ಸಮೂಹ ಗೀತ ರೂಪಕ ಪ್ರಸ್ತುತಪಡಿಸಲಾಯಿತು.
ಈ ಸಂದರ್ಭದಲ್ಲಿ ಸನಾತನ ನಾಟ್ಯಾಲಯದ ನೃತ್ಯ ಗುರು ವಿದುಷಿ ಶಾರದಾಮಣಿ ಶೇಖರ್, ವಿದುಷಿ ಶ್ರೀಲತಾ ನಾಗರಾಜ್, ನಿರ್ದೇಶಕ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.