Sanathana Natyalaya

‘ಮುಂಗಾರು ರಂಗ ಸಿರಿ’ ಸರಣಿ ಕಾರ್ಯಕ್ರಮ

ರಂಗಸ್ಪಂದನ ವತಿಯಿಂದ ನಡೆಯಲಿರುವ ‘ಮುಂಗಾರು ರಂಗ ಸಿರಿ’ ಸರಣಿ ಕಾರ್ಯಕ್ರಮವನ್ನು ದಿನಾಂಕ 18-6-2017 ರಂದು ಸನಾತನ ನಾಟ್ಯಾಲಯದ ನೃತ್ಯಗುರುಗಳಾದ ಶಾರದಾಮಣಿ ಶೇಖರ್­ರವರು ಉದ್ಘಾಟಿಸಿದರು. ನಂತರ ಸನಾತನ ನಾಟ್ಯಾಲಯದ ವತಿಯಿಂದ ನೃತ್ಯಪ್ರದರ್ಶನ ನೆರವೇರಿತು.  ರಂಗಸ್ಪಂದನದ ವಿ. ಜಿ. ಪಾಲ್, ಚಲನಚಿತ್ರ ನಿರ್ಮಾಪಕರಾದ ಲ|ತಾರನಾಥ ಶೆಟ್ಟಿ ಹಾಗೂ ಕೊಲ್ಲಾಡಿ ಬಾಲಕೃಷ್ಣ ರೈ ಉಪಸ್ಥಿತರಿದ್ದರು.

Read More

ಕಲಾವಿದರ ಸಭೆ

ಮಂಗಳೂರು ಮೇಯರ್ ಕವಿತ ಸನಿಲ್ ಅವರು ಕರೆದ ಕಲಾವಿದರ ಸಭೆಯಲ್ಲಿ ಭಾಗವಹಿಸಿದ ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ್ ಶೆಟ್ಟಿಯವರು.

Read More

ಸ್ವರುಣ್ ಸ್ಮರಣಾಂಜಲಿ – 2017

ಅದ್ವಿತೀಯ ಪ್ರತಿಭಾಶಾಲಿ, ಕಲಾಸಾಧಕ, ಸಮಾಜ ಸೇವಕ, ಕೀರ್ತಿಶೇಷ ದಿ| ಸ್ವರುಣ್ ರಾಜ್ ಸಂಸ್ಮರಣೆಯ 4ನೇ ವರ್ಷದ ಕಾರ್ಯಕ್ರಮ ಸ್ವರುಣ್ ಸ್ಮರಣಾಂಜಲಿಯು ದಿನಾಂಕ 9-6-2017 ರಂದು ಸನಾತನ ನಾಟ್ಯಾಲಯದ ಸಭಾಂಗಣದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ರವಿಚಂದ್ರ ಪಿ.ಎಂ. ಅವರು ವಹಿಸಿದ್ದರು. ಸ್ವರುಣ್ ನುಡಿನಮನವನ್ನು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಚಲನಚಿತ್ರ ನಟ ತುಳುನಾಡ ಬೊಳ್ಳಿ ಅರ್ಜುನ್ ಕಾಪಿಕಾಡ್ ಭಾಗವಹಿಸಿದ್ದರು. ಸಭಾ ಸಮಾರಂಭದ ನಂತರ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ನೃತ್ಯನಮನ […]

Read More

ಶುಭಾಮಣಿ ಚಂದ್ರಶೇಖರ್ ಭರತನಾಟ್ಯ ಕಾರ್ಯಕ್ರಮ

ಸನಾತನ ನಾಟ್ಯಾಲಯದ ನೃತ್ಯಗುರು ಶಾರದಾಮಣಿ ಶೇಖರ್­ರವರ ಪುತ್ರಿ ದೆಹಲಿಯ ಖ್ಯಾತ ನೃತ್ಯಪಟು ರಮಾ ವೈದ್ಯನಾಥನ್­ರವರ ಶಿಷ್ಯೆ ಶುಭಾಮಣಿ ಚಂದ್ರಶೇಖರ್ ಇವರ ಭರತನಾಟ್ಯ ಕಾರ್ಯಕ್ರಮ ಮಂಗಳೂರಿನ ಪುರಭವನದಲ್ಲಿ ನೆರವೇರಿತು.

Read More

ಪಲ್ಲಿಪಾಡಿಯ ಋತ್ ಸಂಹಿತ ಯಾಗದಲ್ಲಿ ನೃತ್ಯ ಪ್ರದರ್ಶನ

ಪೊಳಲಿ ಬಳಿ ಪಲ್ಲಿಪಾಡಿಯಲ್ಲಿ ನಡೆದ ಋತ್ ಸಂಹಿತ ಯಾಗದಲ್ಲಿ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳು ನೃತ್ಯ  ಪ್ರದರ್ಶನ ನೀಡಿದ ಸಂದರ್ಭದಲ್ಲಿ ಎಲ್ಲರಿಗೂ ಪ್ರಸಾದ ನೀಡಿ ಗೌರವಿಸಿದರು.

Read More

ಏಪ್ರಿಲ್ 24 – ಶುಭಾಮಣಿ ಚಂದ್ರಶೇಖರ್‌ ಭರತನಾಟ್ಯ ಪ್ರದರ್ಶನ

ಸನಾತನ ನಾಟ್ಯಾಲಯದ ನೃತ್ಯ ಗುರುಗಳಾದ ವಿದುಷಿ ಶಾರದಾಮಣಿ ಶೇಖರ್‌ರವರ ಸುಪುತ್ರಿ ಹಾಗೂ ದೆಹಲಿಯ ಕಲೈಮಾಮಣಿ ರಮಾ ವೈದ್ಯನಾಥನ್‌ರವರ ಶಿಷ್ಯೆ, ಶುಭಾಮಣಿ ಚಂದ್ರಶೇಖರ್‌ರವರು ಏಪ್ರಿಲ್ 24 ನೇ ಸೋಮವಾರ ಸಂಜೆ 6.30 ಕ್ಕೆ ಮಂಗಳೂರು ಪುರಭವನದಲ್ಲಿ ಭರತನಾಟ್ಯ ಪ್ರದರ್ಶನವನ್ನು ನೀಡಲಿದ್ದಾರೆ. ನೃತ್ಯ ಕಾರ್ಯಕ್ರಮದ ಬಳಿಕ ನೃತ್ಯ ಗುರು ಉಳ್ಳಾಲ ಮೋಹನ್ ಕುಮಾರ್ ಮತ್ತು ಕಲಾ ವಿಮರ್ಶಕ ಎ. ಈಶ್ವರಯ್ಯನವರು ನೃತ್ಯದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಲಿದ್ದಾರೆ. ಶುಭಾಮಣಿ ಬಾಲ್ಯದಿಂದಲೇ ಚೆನ್ನೈಯ ಕಲಾಕ್ಷೇತ್ರದಲ್ಲಿ ನೃತ್ಯಾಭ್ಯಾಸವನ್ನು ಮಾಡಿ, ಬಳಿಕ ದೆಹಲಿಯ ರಮಾ ವೈದ್ಯನಾಥನ್‌ರವರಲ್ಲಿ […]

Read More

ಸನಾತನ ಸಂಸ್ಕಾರ ಶಿಬಿರ

ರಜಾ ಕಾಲದಲ್ಲಿ ನಡೆಯುವಂತಹ ಮಕ್ಕಳ ಶಿಬಿರಗಳಲ್ಲಿ ರಾಷ್ಟ್ರ ಜಾಗೃತಿ, ಧರ್ಮ ಜಾಗೃತಿ ಮತ್ತು ಉತ್ತಮ ಸಂಸ್ಕಾರ ನೀಡುವ ಕಾರ್ಯವು ನಿರಂತರವಾಗಿ ನಡೆಯಲಿ ಎಂದು ಸಂಸ್ಕಾರ ಭಾರತಿಯ ಅಧ್ಯಕ್ಷರಾದ ಪುರುಷೋತ್ತಮ ಭಂಡಾರಿ ಅಡ್ಯಾರ್ ಹೇಳಿದರು. ಸನಾತನ ನಾಟ್ಯಾಲಯದಲ್ಲಿ ನಡೆದಂತಹ ಒಂದು ವಾರದ ಸನಾತನ ಸಂಸ್ಕಾರ ಶಿಬಿರದಲ್ಲಿ ಸಮಾರೋಪ ಭಾಷಣವನ್ನು ಮಾಡಿದರು. ಅಧ್ಯಕ್ಷತೆಯನ್ನು ವಿಶ್ವ ಹಿಂದೂ ಪರಿಷತ್‌ನ ಕರ್ನಾಟಕ ರಾಜ್ಯದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಮನೋಹರ್ ತುಳಜಾರಾಮ್ ವಹಿಸಿದರು. ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ್ ಶೆಟ್ಟಿ ಪ್ರಾಸ್ತಾವಿಕ ಭಾಷಣ ಮಾಡಿದರು. […]

Read More

Testimonials

Sanathana Natyalaya is much more than just a dance school for many. It is a home, a community, a group of people that want to support each other unconditionally to...

Shalmalee Ghate