ಅದ್ವಿತೀಯ ಪ್ರತಿಭಾಶಾಲಿ, ಕಲಾಸಾಧಕ, ಸಮಾಜ ಸೇವಕ, ಕೀರ್ತಿಶೇಷ ದಿ| ಸ್ವರುಣ್ ರಾಜ್ ಸಂಸ್ಮರಣೆಯ 4ನೇ ವರ್ಷದ ಕಾರ್ಯಕ್ರಮ ಸ್ವರುಣ್ ಸ್ಮರಣಾಂಜಲಿಯು ದಿನಾಂಕ 9-6-2017 ರಂದು ಸನಾತನ ನಾಟ್ಯಾಲಯದ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ರವಿಚಂದ್ರ ಪಿ.ಎಂ. ಅವರು ವಹಿಸಿದ್ದರು. ಸ್ವರುಣ್ ನುಡಿನಮನವನ್ನು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಚಲನಚಿತ್ರ ನಟ ತುಳುನಾಡ ಬೊಳ್ಳಿ ಅರ್ಜುನ್ ಕಾಪಿಕಾಡ್ ಭಾಗವಹಿಸಿದ್ದರು.
ಸಭಾ ಸಮಾರಂಭದ ನಂತರ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ನೃತ್ಯನಮನ ಕಾರ್ಯಕ್ರಮ ನಡೆಯಿತು.