ಸನಾತನ ನಾಟ್ಯಾಲಯದ ನೃತ್ಯ ಗುರುಗಳಾದ ವಿದುಷಿ ಶಾರದಾಮಣಿ ಶೇಖರ್‌ರವರ ಸುಪುತ್ರಿ ಹಾಗೂ ದೆಹಲಿಯ ಕಲೈಮಾಮಣಿ ರಮಾ ವೈದ್ಯನಾಥನ್‌ರವರ ಶಿಷ್ಯೆ, ಶುಭಾಮಣಿ ಚಂದ್ರಶೇಖರ್‌ರವರು ಏಪ್ರಿಲ್ 24 ನೇ ಸೋಮವಾರ ಸಂಜೆ 6.30 ಕ್ಕೆ ಮಂಗಳೂರು ಪುರಭವನದಲ್ಲಿ ಭರತನಾಟ್ಯ ಪ್ರದರ್ಶನವನ್ನು ನೀಡಲಿದ್ದಾರೆ. ನೃತ್ಯ ಕಾರ್ಯಕ್ರಮದ ಬಳಿಕ ನೃತ್ಯ ಗುರು ಉಳ್ಳಾಲ ಮೋಹನ್ ಕುಮಾರ್ ಮತ್ತು ಕಲಾ ವಿಮರ್ಶಕ ಎ. ಈಶ್ವರಯ್ಯನವರು ನೃತ್ಯದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಲಿದ್ದಾರೆ.
ಶುಭಾಮಣಿ ಬಾಲ್ಯದಿಂದಲೇ ಚೆನ್ನೈಯ ಕಲಾಕ್ಷೇತ್ರದಲ್ಲಿ ನೃತ್ಯಾಭ್ಯಾಸವನ್ನು ಮಾಡಿ, ಬಳಿಕ ದೆಹಲಿಯ ರಮಾ ವೈದ್ಯನಾಥನ್‌ರವರಲ್ಲಿ ಮುಂದುವರಿಸಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿರುವುದಲ್ಲದೆ, ನಟುವಾಂಗ, ನೃತ್ಯ ಪ್ರಾತ್ಯಕ್ಷಿಕೆ, ನೃತ್ಯ ಕಾರ್ಯಾಗಾರಗಳನ್ನು ನೆರವೇರಿಸಿದ್ದಾರೆ.