ರಜಾ ಕಾಲದಲ್ಲಿ ನಡೆಯುವಂತಹ ಮಕ್ಕಳ ಶಿಬಿರಗಳಲ್ಲಿ ರಾಷ್ಟ್ರ ಜಾಗೃತಿ, ಧರ್ಮ ಜಾಗೃತಿ ಮತ್ತು ಉತ್ತಮ ಸಂಸ್ಕಾರ ನೀಡುವ ಕಾರ್ಯವು ನಿರಂತರವಾಗಿ ನಡೆಯಲಿ ಎಂದು ಸಂಸ್ಕಾರ ಭಾರತಿಯ ಅಧ್ಯಕ್ಷರಾದ ಪುರುಷೋತ್ತಮ ಭಂಡಾರಿ ಅಡ್ಯಾರ್ ಹೇಳಿದರು.
ಸನಾತನ ನಾಟ್ಯಾಲಯದಲ್ಲಿ ನಡೆದಂತಹ ಒಂದು ವಾರದ ಸನಾತನ ಸಂಸ್ಕಾರ ಶಿಬಿರದಲ್ಲಿ ಸಮಾರೋಪ ಭಾಷಣವನ್ನು ಮಾಡಿದರು. ಅಧ್ಯಕ್ಷತೆಯನ್ನು ವಿಶ್ವ ಹಿಂದೂ ಪರಿಷತ್‌ನ ಕರ್ನಾಟಕ ರಾಜ್ಯದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಮನೋಹರ್ ತುಳಜಾರಾಮ್ ವಹಿಸಿದರು. ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ್ ಶೆಟ್ಟಿ ಪ್ರಾಸ್ತಾವಿಕ ಭಾಷಣ ಮಾಡಿದರು. ವಿದುಷಿ ಶ್ರೀಲತಾ ನಾಗರಾಜ್‌ರವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು. ವಿದುಷಿ ಶಾರದಾಮಣಿ ಶೇಖರ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
18