Sanathana Natyalaya

ಆಗಸ್ಟ್ 11 : ಭರತನಾಟ್ಯ ಮತ್ತು ಯಕ್ಷಗಾನ ಬಯಲಾಟ

ಭಾರತೀಯ ವಿದ್ಯಾಭವನ ಮಂಗಳೂರು, ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಸನಾತನ ನಾಟ್ಯಾಲಯ, ಮಂಗಳೂರು ದಿನಾಂಕ 11-8-2018 ರಂದು ಸನಾತನ ನಾಟ್ಯಾಲಯ ಸಭಾಂಗಣದಲ್ಲಿ ಕುಮಾರಿ ಶ್ರವಣ ಕುಮಾರಿ ವೇಣೂರು ಇವರಿಂದ ಭರತನಾಟ್ಯ, ಗುರು ಶ್ರೀ ಬನ್ನಂಜೆ ಸಂಜೀವ ಸುವರ್ಣ ಇವರ ನಿರ್ದೇಶನದಲ್ಲಿ ಯಕ್ಷಗಾನ ಕೇಂದ್ರ ಉಡುಪಿ ಇಲ್ಲಿನ ವಿದ್ಯಾರ್ಥಿಗಳಿಂದ ವಾಲಿ ಮೋಕ್ಷ ಯಕ್ಷಗಾನ ಬಯಲಾಟವು ನಡೆಯಿತು. Click to view more photos Photos of Yakshagana Bayalata  

Read More

ಜುಲೈ 28 : ಸನಾತನ ಗುರು ಪರಂಪರ

ಸನಾತನ ನಾಟ್ಯಾಲಯದ ವತಿಯಿಂದ ಜರುಗಿದ ಗುರು ಸಂಸ್ಮರಣೆ, ಗುರುನಮನ, ಗುರುಪ್ರೇರಣೆ (ಸನಾತನ ಗುರು ಪರಂಪರೆ) ಕಾರ್ಯಕ್ರಮವು 28 ಜುಲೈ 2018  ರಂದು ಪುರಭವನದಲ್ಲಿ ನಡೆಯಿತು. ಪತ್ರಕರ್ತ ರತ್ನಕುಮಾರ್ ಮಾತನಾಡಿ ಮಿಜಾರ್ ಜನಾರ್ದನ್ ಅವರ ಕುರಿತು ಸಂಸ್ಮರಣಾ ಭಾಷಣ ಮಾಡಿದರು. ವಿದುಷಿ ಶಾರದಾಮಣಿ ಶೇಖರ್ ನಾಟ್ಯಾಚಾರ್ಯ ಬಿ. ಪ್ರೇಮನಾಥ್ ಅವರ ಪಾದಪೂಜೆ ನೆರವೇರಿಸಿದರು. ವಿದ್ಯಾನ್ ಬಾಲಕೃಷ್ಣ ಮಂಜೇಶ್ವರ ಅವರಿಗೆ ಗುರು ಪ್ರೇರಣೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಿಜಾರ್ ಜನಾರ್ದನ್ ಅವರ ಪತ್ನಿ ಸರಸ್ವತಿ ಅವರನ್ನು ಗೌರವಿಸಲಾಯಿತು. ಕರ್ನಾಟಕ ತುಳು […]

Read More

ಜುಲೈ 22 – ಭಾರತಮಾತಾ ಪೂಜನ-ಮಾತೃವಂದನ

ನಮಗೆ ಜನ್ಮ ಕೊಟ್ಟ ತಾಯಿಯನ್ನು ನಾವು ದೇವರೆಂದು ಪೂಜಿಸುತ್ತೇವೆ. ಅದೇ ರೀತಿ ನಮ್ಮ ಜನ್ಮಭೂಮಿ ಭಾರತ ಕೂಡ ನಮಗೆ ದೇವರು. ಇಂತಹ ಬಾರತಮಾತೆಯ ಮಡಿಲಲ್ಲಿ ಜನ್ಮ ಪಡೆದ ನಾವೇ ಧನ್ಯರು ಎಂದು ಕಾರ್ಕಳದ ಅಕ್ಷಯಾ ಗೋಖಲೆ ಹೇಳಿದರು. 22-7-2018 ರಂದು  ಸನಾತನ ನಾಟ್ಯಾಲಯ ಸಭಾಂಗಣದಲ್ಲಿ ನಡೆದ ಭಾರತಮಾತಾ ಪೂಜನ ಮತ್ತು ಮಾತೃವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಸ್ಕಾರ ಭಾರತಿಯ ಪುತ್ತೂರು ಜಿಲ್ಲಾ ಸಂಚಾಲಕರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರ ಮಾರ್ಗದರ್ಶನದಲ್ಲಿ ನಾಟ್ಯಾಲಯದ ವಿದ್ಯಾರ್ಥಿಗಳು ತಮ್ಮ ತಾಯಿಯ ಪಾದಪೂಜೆ […]

Read More

2018ನೇ ಸಾಲಿನ ಭರತನಾಟ್ಯ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿಯರು

ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುವ 2018ನೇ ಸಾಲಿನ ಭರತನಾಟ್ಯದ ಜೂನಿಯರ್, ಸೀನಿಯರ್, ವಿದ್ವತ್ ಪರೀಕ್ಷೆಯಲ್ಲಿ ಸನಾತನ ನಾಟ್ಯಾಲಯದ  ವಿದ್ಯಾರ್ಥಿನಿಯರು ಪಾಲ್ಗೊಂಡರು.

Read More

ಗುರು ಶಾರದಾಮಣಿ ಶೇಖರ್ ಅವರಿಗೆ ಸನ್ಮಾನ

ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ವತಿಯಿಂದ ಭರತ ಮುನಿ ಆಚರಣೆ ಸಂದರ್ಭದಲ್ಲಿ ಗುರು ಶಾರದಾಮಣಿ ಶೇಖರ್ ಅವರಿಗೆ ಸನ್ಮಾನಿಸಲಾಯಿತು.

Read More

5ನೇ ವರ್ಷದ ಸ್ವರುಣ್ ಸ್ಮರಣಾಂಜಲಿ ಕಾರ್ಯಕ್ರಮ

ಸನಾತನ ನಾಟ್ಯಾಲಯದ ಆಶ್ರಯದಲ್ಲಿ ದಿನಾಂಕ 9-6-2018 ರಂದು ನಗರದ ಪುರಭವನದಲ್ಲಿ ದಿ|| ಸ್ವರುಣ್ ರಾಜ್ ಅವರ ಸ್ಮರಣಾರ್ಥ 5ನೇ ವರ್ಷದ ಸ್ವರುಣ್ ಸ್ಮರಣಾಂಜಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಸುರೇಶ್ ರಾಜ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಚಂದ್ರಶೇಖರ್ ಕೆ. ಶೆಟ್ಟಿ, ವಿದುಷಿ ಶಾರದಾಮಣಿ ಶೇಖರ್, ವಿದುಷಿ ಶ್ರೀಲತಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ವಿದುಷಿ ಶಾರದಾಮಣಿ ಶೇಖರ್ ಅವರ ಪುತ್ರಿ ಶುಭಾಮಣಿ ಚಂದ್ರಶೇಖರ್ ಮತ್ತು ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ […]

Read More

Testimonials

“SanatanaNatyalaya” is not only an Institution of repute in coastal belt of Karnataka imparting quality traditional Indian Classical dance form education for over 3 decades and so but also a...

R. K. Shiroor, Nairobi-Kenya