
ವಿಶ್ವಹಿಂದೂ ಪರಿಷತ್, ಬಜರಂಗದಳ ಆಶ್ರಯದಲ್ಲಿ ಹೋಯಿಗೆ ಬಜಾರ್‌ನಲ್ಲಿ ನಡೆದ ಸತ್ಯನಾರಾಯಣ ಪೂಜೆಯಲ್ಲಿ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳು ಪುಣ್ಯ ಭೂಮಿ ಭಾರತ ನುಡಿ ನಾದ ನಾಟ್ಯಾಮೃತ ಪ್ರದರ್ಶಿಸಿದರು.
ಕಾರ್ಕಳದ ಸಾಹಿತ್ಯ ಸಂಘದ ವತಿಯಿಂದ ನಡೆದ ಯುಗಾದಿ ಉತ್ಸವ ಕಾರ್ಯಕ್ರಮದಲ್ಲಿ ಗುರು ಶಾರದಾಮಣಿ ಶೇಖರ್ ರವರಿಗೆ ಸನ್ಮಾನ ಹಾಗೂ ಪುಣ್ಯ ಭೂಮಿ ಭಾರತ ಪ್ರದರ್ಶನ ನಡೆಯಿತು.
ಮಂಗಳೂರು ಕೇಂದ್ರ ಮೈದಾನದಲ್ಲಿ ನಡೆದ ರಾಮೋತ್ಸವದಲ್ಲಿ ಮಂಗಳೂರು ಸನಾತನ ನಾಟ್ಯಲಯದ ವಿದುಷಿ ಶಾರದಾಮಣಿ ಶೇಖರ್ ಮತ್ತು ಶ್ರೀಲತನಾಗರಾಜ್ ಶಿಷ್ಯರಿಂದ ಆದರ್ಶ ಗೋಖಲೆ ನೀರೂಪಣೆಯ ಪುಣ್ಯ ಭೂಮಿ ಭಾರತ ನುಡಿ ನಾದ ನಾಟ್ಯಾಮೃತ ಪ್ರದರ್ಶಿಸಲ್ಪಟ್ಟಿತು.
ಮಾರ್ಚ್ 7 ರಂದು ಮಂದಾರ ಬೈಲ್ ದುರ್ಗಾ ಪರಮೇಶ್ವರಿ ವೆಂಕಟ್ರಮಣ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ನೃತ್ಯ ಸೇವೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಗುರು ಶಾರದಾಮಣಿ ಶೇಖರ್ ಸನ್ಮಾನವನ್ನು ಸ್ವೀಕರಿಸಿದರು.
ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸುವರ್ಣಸ್ ಸಾಂಸ್ಕೃತಿಕ ಕಲಾ ವೈಭವದಲ್ಲಿ ರಾಷ್ಟ್ರ ದೇವೋ ಭವ ಖ್ಯಾತಿಯ ಮಂಗಳೂರಿನ ಸನಾತನ ನಾಟ್ಯಲಯದ ಪುಣ್ಯ ಭೂಮಿ ಭಾರತ ನುಡಿ ನಾದ ನಾಟ್ಯಾಮೃತ ಪ್ರದರ್ಶನಗೊಂಡಿತು.
ದಿನಾಂಕ 21-2-2018 ರಂದು ಮಾಣಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆದ ನಾಗಮಂಡಲ ಉತ್ಸವದ ಪ್ರಯುಕ್ತ ಜರಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ವತಿಯಿಂದ ರಾಷ್ಟ್ರ ದೇವೋಭವ ಕಾರ್ಯಕ್ರಮ ಪ್ರಸ್ತುತ ಪಡಿಸಲಾಯಿತು.
ದಿನಾಂಕ 14-2-2018 ರಂದು ಚಾರ್ಮಾಡಿಯ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ರಾಷ್ಟ್ರ ದೇವೋಭವ ಕಾರ್ಯಕ್ರಮ ನೆರವೇರಿತು.
Duet Bharathanatyam performance by Shubhamani Chandrashekhar and Himanshu Srivastav on 5th Feb. 2018 at Townhall, Mangaluru organized by Manikrishna Swami Academy. Click to view more photos