ಸನಾತನ ನಾಟ್ಯಾಲಯದ ವತಿಯಿಂದ ಜರುಗಿದ ಗುರು ಸಂಸ್ಮರಣೆ, ಗುರುನಮನ, ಗುರುಪ್ರೇರಣೆ (ಸನಾತನ ಗುರು ಪರಂಪರೆ) ಕಾರ್ಯಕ್ರಮವು 28 ಜುಲೈ 2018 ರಂದು ಪುರಭವನದಲ್ಲಿ ನಡೆಯಿತು. ಪತ್ರಕರ್ತ ರತ್ನಕುಮಾರ್ ಮಾತನಾಡಿ ಮಿಜಾರ್ ಜನಾರ್ದನ್ ಅವರ ಕುರಿತು ಸಂಸ್ಮರಣಾ ಭಾಷಣ ಮಾಡಿದರು.
ವಿದುಷಿ ಶಾರದಾಮಣಿ ಶೇಖರ್ ನಾಟ್ಯಾಚಾರ್ಯ ಬಿ. ಪ್ರೇಮನಾಥ್ ಅವರ ಪಾದಪೂಜೆ ನೆರವೇರಿಸಿದರು. ವಿದ್ಯಾನ್ ಬಾಲಕೃಷ್ಣ ಮಂಜೇಶ್ವರ ಅವರಿಗೆ ಗುರು ಪ್ರೇರಣೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಿಜಾರ್ ಜನಾರ್ದನ್ ಅವರ ಪತ್ನಿ ಸರಸ್ವತಿ ಅವರನ್ನು ಗೌರವಿಸಲಾಯಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಎ. ಶಿವಾನಂದ ಕರ್ಕೇರ ಮುಖ್ಯ ಅತಿಥಿಯಾಗಿದ್ದರು. ಕಿನ್ನಿಗೊಳಿ ಯುಗಪುರುಷ ಪತ್ರಿಕೆಯ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ್ ಶೆಟ್ಟಿ, ವಿದುಷಿ ಶ್ರೀಲತಾ ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿಯರಿಂದ ‘ಗುರುಕುಲ ದರ್ಶನ’ ನೃತ್ಯ ನಾಟಕ ಮತ್ತು ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ಜರುಗಿತು.
Gurukula Darshana by students of Maithreyi Gurukula, Murkaje Vitla
Hosadigantha
Deccan Herald