
11-11-2017 ರಂದು ಮಂಗಳೂರಿನ ಪುರಭವನದಲ್ಲಿ ಸನಾತನ ನೃತ್ಯಪ್ರೇರಣ ಕಾರ್ಯಕ್ರಮ ನಡೆಯಿತು.
ಸನಾತನ ನಾಟ್ಯಾಲಯದ ಆಶ್ರಯದಲ್ಲಿ ಸನಾತನ ಜ್ಞಾನಾಮೃತ ಮತ್ತು ಭರತ ನಾಟ್ಯ ಕಾರ್ಯಕ್ರಮವು ನಗರದ ಪುರಭವನದಲ್ಲಿ ಅಕ್ಟೋಬರ್ 21 ರಂದು ನಡೆಯಿತು. ಭರತನಾಟ್ಯದೊಂದಿಗೆ 2017 ನೇ ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಪಿ. ರವೀಂದ್ರ ಪುತ್ತೂರು ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಲಕ್ಷ್ಮಣ ದೇವಾಡಿಗ, ಸಂದೇಶ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ನೃತ್ಯಗುರು ವಿದುಷಿ ಶಾರದಾಮಣಿ ಶೇಖರ್, ವಿದುಷಿ ಶ್ರೀಲತಾ ನಾಗರಾಜ್, ನಿರ್ದೇಶಕರಾದ ಚಂದ್ರಶೇಖರ್ ಕೆ. ಶೆಟ್ಟಿ ಸೇರಿದಂತೆ ಹಲವರು […]
ಅಕ್ಟೋಬರ್ 18ರಂದು ಜಿಲ್ಲಾಡಳಿತ, ಧಾರ್ಮಿಕ ದತ್ತಿ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಹಾಸನಾಂಬ ದೇವಿ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ವೈವಿಧ್ಯ ಪ್ರಸ್ತುತ ಪಡಿಸಲಾಯಿತು. ಈ ಸಂದರ್ಭ ಹಾಸನದ ಜಿಲ್ಲಾಧಿಕಾರಿ ಶ್ರೀಮತಿ ರೋಹಿಣಿ ಸಿಂಧೂರಿ ದಾಸರಿ ಅವರು ಉಪಸ್ಥಿತರಿದ್ದರು.
ದಿನಾಂಕ 28-9-17 ರಂದು ಶ್ರೀ ವೀರಮಾರುತಿ ಸೇವಾ ಸಂಘ ಮೂಡುಬಿದಿರೆ ವತಿಯಿಂದ ಏರ್ಪಡಿಸಲಾದ ಶ್ರೀ ಶಾರದಾ ಮಹೋತ್ಸವದಲ್ಲಿ ಮೂಡಬಿದಿರೆಯ ವೆಂಕಟರಮಣನ ದೇವಸ್ಥಾನದಲ್ಲಿ ನಡೆದ ರಾಷ್ಟ್ರದೇವೋಭವ ಕಾರ್ಯಕ್ರಮದಲ್ಲಿ ಸನ್ಮಾನ.
Sanathana Natyalaya students performed at Gorkarnatheshwara Temple Kudroli during Navaratri Utsava on 24th Sept. 2017.