
ಗುರುಪುರ ವಜ್ರದೇಹಿ ಮಠದ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಅಷ್ಟಾವಧಾನದಲ್ಲಿ ನೃತ್ಯ ಸೇವೆಯನ್ನು ಸನಾತನ ನಾಟ್ಯಾಲಯದ ವಿದ್ಯಾರ್ಥಿನಿಯರು ಸಲ್ಲಿಸಿದರು.
ಮಂಗಳೂರು: ಗುರುವಿನ ವ್ಯಕ್ತಿತ್ವವನ್ನು ಶಿಷ್ಯರ ಸಾಧನೆಯಲ್ಲಿ ಕಾಣು ಎಂಬುದು ಹಿರಿಯರ ಅನುಭವದ ಮಾತು. ನೃತ್ಯ ಗುರು ಶಾರದಾಮಣಿ ಶೇಖರ್ ಈ ಲೋಕೋಕ್ತಿಗೆ ಅನ್ವರ್ಥ ನಾಮ. ಕಾರಣ ಇಲ್ಲಿದೆ. ಕಳೆದ ಮೂರು ದಶಕಗಳಲ್ಲಿ ಸನಾತನ ನಾಟ್ಯಾಲಯದ ಸಾವಿರಾರು ವಿದ್ಯಾರ್ಥಿಗಳು ನೃತ್ಯಪಟುವಾಗಿ ಹೊರಹೊಮ್ಮಿದ್ದರೆ ಅದರ ಮೂಲ ಪ್ರೇರಣೆ ಶಾರದಾಮಣಿ ಶೇಖರ್! ಇದೀಗ ಅವರ ಶಿಷ್ಯರು ಜಿಲ್ಲೆ, ರಾಜ್ಯ, ದೇಶದ ಗಡಿ ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೃತ್ಯ ಗುರುಗಳಾಗಿ ಮಿಂಚುತ್ತಿದ್ದಾರೆ. ಮಂಗಳೂರಿನವರೇ ಆದ ಶಾರದಾಮಣಿ ಶೇಖರ್, ಭರತನಾಟ್ಯವನ್ನು ಕರ್ನಾಟಕ ಕಲಾತಿಲಕ ನಾಟ್ಯಾಚಾರ್ಯ […]
ನೃತ್ಯ ಗುರು ಶಾರದಾಮಣಿ ಶೇಖರ್ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2017-18 ನೇ ಸಾಲಿನ ‘ಕರ್ನಾಟಕ ಕಲಾಶ್ರೀ ಗೌರವ ಪ್ರಶಸ್ತಿ’ ಪ್ರದಾನ ಮಾಡಿತು. ನವೆಂಬರ್ 26 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ 15 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಾರದಾಮಣಿ ಶೇಖರ್ ಅವರಿಗೆ ನೃತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಕಲಾಶ್ರೀ ಗೌರವ ಪ್ರಶಸ್ತಿಯು ದೊರಕಿದ್ದು, ಈ ಪ್ರಶಸ್ತಿಯು 50 ಸಾವಿರ ರೂ. ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ.
ಸನಾತನ ನಾಟ್ಯಾಲಯದ ವಿದ್ಯಾರ್ಥಿನಿ ಶ್ರವಣ ಕುಮಾರಿ ನವೆಂಬರ್ 16 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಿದರು.
ನವೆಂಬರ್ 15 ರಂದು ಗುರ್ಜಿ ದೀಪೋತ್ಸವ ಸಮಿತಿ ಬಳ್ಳಾಲ್‌ಬಾಗ್ ವತಿಯಿಂದ ಏರ್ಪಡಿಸಲ್ಪಟ್ಟ 66 ನೇ ವರ್ಷದ ಗುರ್ಜಿ ದೀಪೋತ್ಸವದಲ್ಲಿ ಸನಾತನ ನಾಟ್ಯಾಲಯದ ವತಿಯಿಂದ ನೃತ್ಯ ಪ್ರದರ್ಶನ ನಡೆಯಿತು.
Sharadamani Shekar felicitated at Raga Sudha Rasa 2017 – Rashtriya Sangeethotsava which is organised by Mani Krishna Swamy Academy (R.) at Town Hall Mangaluru on 12-11-2017.