ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಟಾನ ಮಂಗಳೂರು (ಸನಾತನ ಶಾಖೆ, ಕದ್ರಿ ಶಾಖೆ, ಕೃಷ್ಣ ಮಂದಿರ ಶಾಖೆ, ಪಡೀಲ್ ಶಾಖೆ, ಭಗವತಿ ಶಾಖೆಗಳ ಸಂಯೋಗದೊಂದಿಗೆ) ವರ್ಚುವಲ್ ಮುಖಾಂತರ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಸನಾತನ ನಾಟ್ಯಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಶೆಟ್ಟಿ ಅವರು ದೀಪ ಪ್ರಜ್ವಲಿಸಿ ಶುಭ ನುಡಿಗಳನ್ನಾಡಿದರು.
Read More
20-6-2021 ರಂದು ರಂಗವಿಹಾರ – ಕರಾವಳಿಯ ಸಾಂಸ್ಕೃತಿಕ ಜಗತ್ತಿನ ಅನಾವರಣ ವತಿಯಿಂದ ನಮ್ಮ ಕುಡ್ಲ ಚಾನೆಲ್‌ನಲ್ಲಿ ಏರ್ಪಡಿಸಲಾಗಿದ್ದ ರಂಗ ಪುನಶ್ಚೇತನ : ಎಂದು ? ಹೇಗೆ ? ಕರಾವಳಿಯ ಸಾಂಸ್ಕೃತಿ ಜಗತ್ತು ಮರುಜೀವ ಪಡೆದೀತೇ ಎಂಬ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ ಶೆಟ್ಟಿ ಅವರು ಅತಿಥಿಗಳಾಗಿ ಪಾಲ್ಗೊಂಡರು.
Read More
ಸನಾತನ ನಾಟ್ಯಾಲಯದಲ್ಲಿ ಕುಟುಂಬ ಪ್ರಬೋಧನದ ಅಖಿಲ ಭಾರತೀಯ ಸಂಯೋಜಕರಾದ ಶ್ರೀ ಕಜಂಪಾಡಿ ಸುಬ್ರಹಮಣ್ಯ ಭಟ್ ಅವರು ಕುಟುಂಬ ಚಿಂತನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
Read More
ವಿಶ್ವ ಹಿಂದೂ ಪರಿಷತ್ ಭಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ವತಿಯಿಂದ ಬೋರುಗುಡ್ಡೆಯಲ್ಲಿ ಏರ್ಪಡಿಸಲಾದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಯುಕ್ತ ಸನಾತನ ನಾಟ್ಯಾಲಯದ ವತಿಯಿಂದ ಪುಣ್ಯಭೂಮಿ ಭಾರತ ನೃತ್ಯ ಪ್ರದರ್ಶನ ನಡೆಯಿತು.
Read More
ಬೆಂಗಳೂರಿನ ಪ್ರತಿಷ್ಠಿತ ಕಲಾ ಸಂಸ್ಥೆ ಇಂಟರ್‌ನ್ಯಾಶನಲ್ ಆರ್ಟ್ಸ್ ಆ‍್ಯಂಡ್ ಕಲ್ಚರಲ್ ಫೌಂಡೇಶನ್ ವತಿಯಿಂದ ಕೇಂದ್ರ ಸಂಸ್ಕೃತಿ ಸಚಿವಾಲಯ, ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಖ್ಯಾತ ಕಲಾ ಪ್ರವರ್ತಕ ಶ್ರೀವತ್ಸ ಶಾಂಡಿಲ್ಯ ಅವರ ನೇತೃತ್ವದಲ್ಲಿ ಶ್ರೀರಾಮ ನೃತ್ಯ ನಮನ ಕಾರ್ಯಕ್ರಮವು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ‘ಶ್ರೀ ರಾಮ ತೋಡೆಯಂ ಮಂಗಲ’ ನೃತ್ಯ ನಮನ ನಡೆಯಿತು. ಈ ಸಂದರ್ಭದಲ್ಲಿ ವಿದೂಷಿ ಶಾರದಾ ಮಣಿ ಶೇಖರ್ ಹಾಗೂ ವಿದೂಷಿ ಶ್ರೀಲತಾ ನಾಗರಾಜ್ ಅವರು ಉಪಸ್ಥಿತರಿದ್ದರು.
Read More
ಶ್ರೀ ಕ್ಷೇತ್ರ ಧರ್ಮಸ್ಥಳ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ್ದ 18 ನೇ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಯ ವಿಜೇತರಿಗೆ ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ಜರುಗಿದ ಪುರಸ್ಕಾರ ಸಮಾರಂಭದಲ್ಲಿ ಸನಾತನ ನಾಟ್ಯಾಲಯ ವತಿಯಿಂದ ಕುಂಚ-ಗಾನ ನೃತ್ಯ ವೈಭವ ನಡೆಯಿತು.
Read More
ಬೆಳ್ತಂಗಡಿ ತಾಲೂಕಿನ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸನಾತನ ನಾಟ್ಯಾಲಯದ ವತಿಯಿಂದ ಪುಣ್ಯಭೂಮಿ ಭಾರತ ಕಾರ್ಯಕ್ರಮವನ್ನು ಪ್ರಸ್ತುತಿಪಡಿಸಲಾಯಿತು.
Read More
ಸನಾತನ ನಾಟ್ಯಾಲಯದಲ್ಲಿ ಸಂಸ್ಕಾರ ಚಿಂತನ ಕಾರ್ಯಕ್ರಮದ ಅಂಗವಾಗಿ ʼಕುಟುಂಬದಲ್ಲಿ ಹೆಣ್ಣು ಮಕ್ಕಳ ಪಾತ್ರʼ ಕುರಿತು ಕುಟುಂಬ ಪ್ರಬೋಧನ್ ವಿಭಾಗ ಮುಖ್ಯಸ್ಥರಾಗಿದ್ದ ಶ್ರೀಮತಿ ಸುಮತಿ ಪೈ ಅವರು ನಡೆಸಿಕೊಟ್ಟರು.
Read More
Performance at Kudroli temple auditorium on 18th January 2021 on account of wedding function of Dr. Nishma.
Read More
ಸನಾತನ ನಾಟ್ಯಾಲಯದ ವತಿಯಿಂದ ಜನವರಿ 17 ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸನಾತನ ನೃತ್ಯೋತ್ಸವ ನಡೆಯಿತು. ದ. ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ಅಧ್ಯಕ್ಷ ಎ. ಸುರೇಶ್ ರೈ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಕಾಸ ಸಮೂಹ ಸಂಸ್ಥೆಗಳ ಡೀನ್ ಮಂಜುಳಾ ಅನಿಲ್ ರಾವ್, ಮನಪಾ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು ಉಪಸ್ಥಿತರಿದ್ದರು. ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ನೃತ್ಯ ಪ್ರದರ್ಶನ ನಡೆಯಿತು.
Read More