Sanathana Natyalaya

ವಿದ್ವತ್ ಪೂರೈಸಿದ ವಿದುಷಿಯರಿಗೆ ಅಭಿನಂದನೆ

ಸಮಾಜ ಮುಖಿ ಕೆಲಸ ಮಾಡುವ ಸನಾತನ ನಾಟ್ಯಾಲಯ

ಮಂಗಳೂರು: ನೃತ್ಯ ಕಲೆ ಮಾತ್ರವಲ್ಲ, ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಭಾರತೀಯ ಸಂಸ್ಕೃತಿಯನ್ನು ಪಸರಿಸಯವ ಸನಾತನ ನಾಟ್ಯಾಲಯದ ಕಾರ್ಯವನ್ನು ಸಮಾಜವು ಗುರುತಿಸಬೇಕು ಎಂದು ಯಕ್ಷ ಧ್ರುವ ಪಟ್ಲ ಫೌಂಡೇಷನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ಕಲೆ ಎಂಬುದು ಯಾವುದಕ್ಕೂ ಅಡೆತಡೆ ಆಗಲ್ಲ. ಅದನ್ನು ನಂಬಿಯೇ ಜೀವನ ಮಾಡುವುದು ಸಾಧ್ಯ. ಕಲೆಯನ್ನು ಪ್ರೀತಿಸಿ ತಪಸ್ಸಾಧನೆ ಮಾಡಿದರೆ ಯಶಸ್ಸು ಸಾಧ್ಯ ಎಂದರು. ಅವರು ಸನಾತನ ನಾಟ್ಯಾಲಯದ ವತಿಯಿಂದ  ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ  ಸನಾತನ ನೃತ್ಯ ಪ್ರೇರಣ ಕಾರ್ಯಕ್ರಮದಲ್ಲಿ 2022ರ ಭರತನಾಟ್ಯ ವಿದ್ವತ್ ಪೂರೈಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.

ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಹಿರಿಯ ಶಾಖಾಧಿಕಾರಿ ಎಲ್.ದಿವಾಕರ್ , ಮಣಿಪಾಲದ ಹೆಜ್ಜೆ ಗೆಜ್ಜೆ ಸಂಸ್ಥೆಯ ನೃತ್ಯಗುರುವಿದುಷಿ ಯಶ ರಾಮಕೃಷ್ಣ ಅಭಿನಂದಿಸಿ ಮಾತನಾಡಿದರು.

ವಿದ್ವತ್ ಪರೀಕ್ಷೆಯಲ್ಲಿ ಪಾಸಾದ ವಿದುಷಿಯರಾದ ಸಾಹಿತ್ಯ ಸುರೇಶ್‌, ಅನನ್ಯ ಕುಂಡಂತಾಯ, ರೀನಾ‌ಕಿಶೋರ್ , ರಿಯಾ ಕಿಶೋರ್, ಅಮೃತ ವಿ, ತುಳಸಿ, ನಾಗರಶ್ಮಿ ಮತ್ತು ಅನನ್ಯ ವಿ. ಅವರನ್ನು ನಾಟ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು.

ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು. ನೃತ್ಯಗುರುಗಳಾದ ವಿದುಷಿ ಶಾರದಾಮಣಿಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಅವರ ನಿರ್ದೇಶನದಲ್ಲಿ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು.

Photo Gallery

Sanatana Nritya Prerana 2023

Media Reports

Watch Full Program

Testimonials

Sanathana Natyalaya is much more than just a dance school for many. It is a home, a community, a group of people that want to support each other unconditionally to...

Shalmalee Ghate