ಅದ್ವಿತೀಯ ಪ್ರತಿಭಾಶಾಲಿ, ಕಲಾಸಾಧಕ, ಸಮಾಜ ಸೇವಕ, ಕೀರ್ತಿಶೇಷ ದಿ| ಸ್ವರುಣ್ ರಾಜ್ ಸಂಸ್ಮರಣೆಯ ೯ ನೇ ವರ್ಷದ ಕಾರ್ಯಕ್ರಮವು ಜೂನ್ 9 ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ. ಎಂ. ಬಿ. ಪುರಾಣಿಕ್ ಅವರು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಸ್ವರುಣ್ ರಾಜ್ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಸುರೇಶ್ ರಾಜ್ ಉಪಸ್ಥಿತರಿದ್ದರು.
ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಸ್ವರುಣ್ ನುಡಿನಮನ ನಡೆಸಿಕೊಟ್ಟರು, ಮುಖ್ಯ ಭಾಷಣಕಾರರಾಗಿ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಪಾಲ್ಗೊಂಡರು. ಶುಭಾಮಣಿ ಚಂದ್ರಶೇಖರ್ ಮತ್ತು ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
Media Reports
Watch Program