ಮಂಗಳೂರು : ಅದ್ವಿತೀಯ ಪ್ರತಿಭಾಶಾಲಿ, ಕಲಾಸಾಧಕ, ಸಮಾಜ ಸೇವಕ, ಕೀರ್ತಿಶೇಷ ದಿ| ಸ್ವರುಣ್ ರಾಜ್ ಸಂಸ್ಮರಣೆಯ ತೃತೀಯ ವರ್ಷದ ಕಾರ್ಯಕ್ರಮ ಸ್ವರುಣ್ ಸ್ಮರಣಾಂಜಲಿ ಕಾರ್ಯಕ್ರಮ 9-6-2016 ರಂದು ಸನಾತನ ನಾಟ್ಯಾಲಯದ ಸಭಾಂಗಣದಲ್ಲಿ ಮಾಜಿ ಶಾಸಕರು, ಹಿರಿಯ ಯಕ್ಷಗಾನ ಕಲಾವಿದರಾದ ಕುಂಬ್ಳೆ ಸುಂದರ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ವಿಹಿಪಂ ಅಧ್ಯಕ್ಷರಾದ ಜಿತೇಂದ್ರ ಎಸ್. ಕೊಟ್ಟಾರಿ ಅವರು ಉಪಸ್ಥಿತರಿದ್ದರು. ಸ್ವರುಣ್ ನುಡಿನಮನವನ್ನು ಶಾಸಕರು, ಕನಾಟಕ ವಿಧಾನ ಪರಿಷತ್ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ನಡೆಸಿಕೊಟ್ಟರು. ಸಂಸದ ನಳಿನ್ ಕುಮಾರ್ ಕಟೀಲ್, ಕ್ಯಾಪ್ಟನ್ ಬ್ರಿಜೇಶ್ ಸೇರಿದಂತೆ ಅನೇಕ ಗಣ್ಯರು ಹಾಗೂ ನೃತ್ಯ ಅಭಿಮಾನಿಗಳು ಪಾಲ್ಗೊಂಡಿದ್ದರು. ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ನೃತ್ಯ ನಮನ ಕಾರ್ಯಕ್ರಮ ನಡೆಯಿತು.