Sanathana Natyalaya

ಡಾ. ಅಮೃತರಿಗೆ, ಶೀಲಾದಿವಾಕರ್‌ ಅವರಿಗೆ ನುಡಿ ನಮನ – ಸತ್ಯನಾಪುರತ ಸಿರಿ ನೃತ್ಯ ರೂಪಕ ಪ್ರದರ್ಶನ

ಮಂಗಳೂರು: ಸಾಹಿತ್ಯ ಕ್ಷೇತ್ರದಲ್ಲಿ ಅಮೃತ ಸೋಮೇಶ್ವರ ಅವರು ಮಾಡಿದ ಸಂಶೋಧನೆಗಳು ಅಪೂರ್ವವಾದುದು. ಯಕ್ಷಗಾನ ಕ್ಷೇತ್ರದಲ್ಲಿ ಅವರು ತಮ್ಮ ಹೊಸ ದೃಷ್ಟಿಕೋನದಿಂದ ಸಂಶೋಧಾನತ್ಮಕ ಕೃತಿಗಳನ್ನು ಬರೆದಿದ್ದಾರೆ. ಅವರು ಸಾಗಿದ ಹಾದಿ ಕಿರಿಯರಿಗೆ ಮಾದರಿ ಎಂದು ಯಕ್ಷಗಾನ ವಿದ್ವಾಂಸ ಎಂ. ಪ್ರಭಾಕರ ಜೋಷಿ ಹೇಳಿದರು.

ಇತ್ತೀಚೆಗೆ ಅಗಲಿದ ಹಿರಿಯ ಸಾಹಿತಿ ಡಾ. ಅಮೃತ ಸೋಮೇಶ್ವರ ಮತ್ತು ಸಂಗೀತ ವಿದುಷಿ ಶೀಲಾ ದಿವಾಕರ್‌ ಅವರಿಗೆ ಸನಾತನ ನಾಟ್ಯಾಲಯದ ವತಿಯಿಂದ ನಗರ ಕುದ್ಮುಲ್‌ ರಂಗರಾವ್ ಪುರಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ನುಡಿನಮನ ಅರ್ಪಿಸಿದರು.

ವಿದ್ವಾಂಸರು, ಮಾರ್ಗದರ್ಶಕರು ಆಗಿದ್ದ ಅಮೃತ ಸೋಮೇಶ್ವರ ಅವರು ಪೌರಾಣಿಕ ಕಥೆಗಳಿಗೆ ಹೊಸ ಅರ್ಥವನ್ನು ಹುಡುಕುತ್ತ, ಯಕ್ಷಗಾನದ ಪ್ರಸಂಗಗಳಿಗೆ ಹೊಸ ಆಯಾಮವನ್ನು ನೀಡಿದವರು. ಅವರಿದ್ದ ಎಂಭತ್ತರ ಮತ್ತು ತೊಂಭತ್ತರ ದಶಕದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಅನೇಕ ಸಂಶೋಧನಾತ್ಮಕ ಕೆಲಸಗಳು ನಡೆದವು ಎಂದು ಹೇಳಿದರು.

ವಿದುಷಿ ಶೀಲಾದಿವಾಕರ್‌ ಅವರು ನಮ್ಮೊಡನೆ ಇನ್ನಷ್ಟು ದಿನ ಇರಬೇಕಿತ್ತು ಎಂಬುದು ಎಲ್ಲರ ಆಶಯ. ಅವರು ತಮ್ಮ ಮಧುರ ಕಂಠದಿಂದ ನೃತ್ಯ ಕ್ಷೇತ್ರಕ್ಕೆ ಸತ್ವ ತುಂಬಿದವರು. ಇವರಿಬ್ಬರ ಆತ್ಮಕ್ಕೂ ಸದ್ಗತಿಯು ದೊರೆಯಲಿ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯಪರಿಷತ್‌ನ ಮಾಜಿ ಅಧ್ಯಕ್ಷರಾದ ಪ್ರದೀಪ್‌ ಕುಮಾರ್ ಕಲ್ಕೂರ ಅವರು ಇಬ್ಬರು ಸಾಧಕರ ಜೀವನವು ಅನುಕರಣೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಮೃತ ಸೋಮೇಶ್ವರರು ರಚಿಸಿದ ಸತ್ಯನಾಪುರದ ಸಿರಿ ನೃತ್ಯ ರೂಪಕವನ್ನು, ವಿದುಷಿ ಶೀಲಾ ದಿವಾಕರ್‌ ಹಾಡಿದ ಹಾಡುಗಳೊಂದಿಗೆ ಸನಾತನ ನಾಟ್ಯಾಲಯದ ಕಲಾವಿದರು ಪ್ರಸ್ತುತಪಡಿಸಿದರು. ನಾಟ್ಯಗುರು ವಿದುಷಿ ಶಾರದಾಮಣಿ ಶೇಖರ್‌ ಮತ್ತು ವಿದುಷಿ ಶ್ರೀಲತಾ ನಾಗರಾಜ್‌ ನಿರ್ದೇಶನದಲ್ಲಿ ನೃತ್ಯ ರೂಪಕವು ಮೂಡಿಬಂತು. ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ್‌ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ವಿದುಷಿ ಶ್ರೀಲತಾ ನಾಗರಾಜ್‌ ನಿರೂಪಿಸಿದರು.

ಸನಾತನ ನುಡಿನಮನ, ನೃತ್ಯಾಂಜಲಿ ಮತ್ತು ನೃತ್ಯ ರೂಪಕ

 

Testimonials

Sanathana Natyalaya is much more than just a dance school for many. It is a home, a community, a group of people that want to support each other unconditionally to...

Shalmalee Ghate