Sanathana Natyalaya

ಸನಾತನ ನಾಟ್ಯಾಲಯ – 40 ವರ್ಷದ ಸಂಭ್ರಮ ಉದ್ಘಾಟನೆ

ಮಂಗಳೂರು: ಜೀವನದಲ್ಲಿ ಸಂಸ್ಕಾರ ಇದ್ದರೆ ಮಾತ್ರ ನಾವು ಪರಿಪೂರ್ಣವಾಗಿ ಬದುಕಲು ಸಾಧ್ಯ. ಭಾರತದಲ್ಲಿ ಕಲಾ‌ ಪ್ರಕಾರಗಳು ಜೀವನಕ್ಕೆ ಅಗತ್ಯ ಸಂಸ್ಕಾರಗಳನ್ನು ಕೊಡಬಲ್ಲವು ಎಂದು ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಹೇಳಿದರು.

ಅವರು ಶನಿವಾರ ನಗರದ ಕುದ್ಮುಲ್ ಪುರಭವನದಲ್ಲಿ ಸನಾತನ ನಾಟ್ಯಾಲಯದ 40 ನೇ ವರ್ಷಾಚರಣೆಯ ಮೊದಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಶೇಣಿ ಮುರಳಿ ಅವರಿಂದ ಶ್ರೀಹರಿದರ್ಶನ ಎಂಬ ಹರಿಕತೆ, ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಸನಾತನ ನಾಟ್ಯಾಲಯದ ನೃತ್ಯಗುರು ವಿದುಷಿ ಶಾರದಾಮಣಿಶೇಖರ್, ವಿದುಷಿ ಶ್ರೀಲತಾ ನಾಗರಾಜ್, ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ, ನಾಗರಾಜ್ ಶೆಟ್ಟಿ, ವಿದುಷಿ ಉಮಾ ಹೆಬ್ಬಾರ್, ವಿದುಷಿ ವಾಣಿಶ್ರೀ, ವಿದುಷಿ ಛಾಯಾಶ್ರೀ, ವಿದುಷಿ ಕೃಪಾ, ವಿದುಷಿ ನೇಹಾ, ವಿಜಿತಾ ಶೆಟ್ಟಿ, ಸಿಂಚನ ಕುಲಾಲ್ ಉಪಸ್ಥಿತರಿದ್ದರು.

 

Testimonials

“SanatanaNatyalaya” is not only an Institution of repute in coastal belt of Karnataka imparting quality traditional Indian Classical dance form education for over 3 decades and so but also a...

R. K. Shiroor, Nairobi-Kenya