ಮಂಗಳೂರಿನ ಸನಾತನ ನಾಟ್ಯಾಲಯ ಮತ್ತು ನೃತ್ಯಾಂಗನ್ ಸಂಸ್ಥೆ ಜಂಟಿಯಾಗಿ ನೃತ್ಯ ವಾಹಿನಿ ಎಂಬ ಕಾರ್ಯಕ್ರಮವು ನವೆಂಬರ್ 5 ರಂದು ಶನಿವಾರ ಸಂಜೆ 5.45 ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ನಾಟ್ಯಂಜಲಿ ಕಲಾ ಅಕಾಡೆಮಿ, ಸುರತ್ಕಲ್ ಇದರ ನೃತ್ಯ ಗುರು ಕರ್ನಾಟಕ ಕಲಾಶ್ರೀ ವಿದ್ವಾನ್ ಚಂದ್ರಶೇಖರ ನಾವಡ ಇವರ ಶಿಷ್ಯೆಯರಾದ ಕುಮಾರಿ ನಂದಿತಾ ಆಚಾರ್ ಮತ್ತು ವಿಧಿಶ ಬೈಕಂಪಾಡಿ ಯುಗಳ ನೃತ್ಯ ಪ್ರದರ್ಶನ ನೀಡಿದರು.
ಬೆಂಗಳೂರಿನ ಅರುಣ ಭಾರ್ಗವಿ ಅವರಿಂದ ಏಕಾರ್ಥ ಭರತನಾಟ್ಯ ಪ್ರದರ್ಶನ ಮತ್ತು ಕುಂಬಳೆಯ ನಾಟ್ಯ ವಿದ್ಯಾನಿಲಯದ ನೃತ್ಯ ನಿರ್ದೇಶಕಿ ಡಾಕ್ಟರ್ ವಿದ್ಯಾ ಕುಂಬಳೆ ಇವರ ಶಿಷ್ಯ ವೃಂದದವರಿಂದ ಸಮೂಹ ಭರತನಾಟ್ಯ ಕಾರ್ಯಕ್ರಮ ನೆರವೇರಿತು.