ಮದುವೆ ಸಹಿತ ಇತರ ಸಂಸ್ಕಾರ ಪ್ರಧಾನ ಸಮಾರಂಭಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಸರ್ವೇ ಸಾಮಾನ್ಯವಾಗಿರುವ ಇಂದಿನ ದಿನಗಳಲ್ಲಿ, ಆದಕ್ಕೆ ವ್ಯತಿರಿಕ್ತವಾಗಿ, ಇತ್ತೀಚೆಗೆ ನಡೆದ ಮದುವೆಯಲ್ಲಿ ಒಂದು ವಿಭಿನ್ನ ಪ್ರಯೋಗ ನಡೆಯಿತು.
ಸಂದರ್ಭ : – ಶ್ರೀಮತಿ ಅಮೃತಕಲಾ ಮತ್ತು ಶ್ರೀ ಬಿ. ಪ್ರಕಾಶ ಪೈ ಇವರ ಮಗಳು ಚಿ. ಪೃಥ್ವಿ ಯ ವಿವಾಹದ ಮುನ್ನಾದಿನ ಮಂಗಳೂರಿನಲ್ಲಿ ನಡೆದ ಫೂಲ್ ಮುದ್ದಿ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಎರಡು ಕುಟುಂಬಗಳ ಸ್ನೇಹ ಮಿಲನದ ಬಳಿಕ, ವರನ ಕಡೆಯವರು ವಧುವಿಗೆ ಕೊಟ್ಟ ಸೀರೆಯನ್ನುಟ್ಟ ವಧುವು ವೇದಿಕೆ ಬರುವ ಸನ್ನಿವೇಶ.
ಸಾಕ್ಷಾತ್ ಲಕ್ಷ್ಮಿ ಸ್ವರೂಪಿಣಿಯಾದ ಮದುಮಗಳನ್ನು ಭಾಗ್ಯದ ಲಕ್ಷ್ಮಿ ಬಾರಮ್ಮ ಎಂಬ ಅರ್ಥಪೂರ್ಣ ಹಾಡಿಗೆ ಸನಾತನ ನಾಟ್ಯಾಲಯದ ವಿದ್ಯಾರ್ಥಿನಿಯರು ಹೆಜ್ಜೆ ಹಾಕುತ್ತಾ ವೇದಿಕೆಗೆ ಬರಮಾಡಿಕೊಂಡ ರೀತಿ ತುಂಬಾ ಸೊಗಸಾಗಿ ಮೂಡಿ ಬಂತು.
ಕಲ್ಪನೆ : – ಶ್ರೀಮತಿ ಸುಮತಿ ಪೈ ಮತ್ತು ಶ್ರೀ ಗಜಾನನ ಪೈ
ನೃತ್ಯ ವಿನ್ಯಾಸ, ನಿರ್ದೇಶನ : – ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್, ಶ್ರೀ ಚಂದ್ರಶೇಖರ ಶೆಟ್ಟಿ, ವಿದುಷಿ ಶ್ರೀಲತಾ ನಾಗರಾಜ್, ಸನಾತನ ನಾಟ್ಯಾಲಯ, ಮಂಗಳೂರು
ಪ್ರೋತ್ಸಾಹ : – ವಧುವಿನ ಸಹೋದರರು
ನಮ್ಮ ಸಂಸ್ಕೃತಿ, ಸಭ್ಯತೆಯನ್ನು ಅನಾವರಣಗೊಳಿಸುವ ಈ ಪುಟ್ಟ ಪ್ರಯತ್ನಕ್ಕೆ ಭಾರಿ ಪ್ರಶಂಸೆ ಸಿಕ್ಕಿರುತ್ತದೆ.