ಕಾರ್ಕಳ: ಕಲೆಯನ್ನು ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶೌರ್ಯ ಸಿಂಪೋನಿ ಸುವ್ಯವಸ್ಥಿತ ರೆಕಾರ್ಡಿಂಗ್ ಸ್ಟುಡಿಯೋ ಕಾರ್ಕಳದಲ್ಲಿ ಶುಭಾರಂಭಗೊಂಡಿದೆ.
ಇದರ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಳ ವುಡ್ ಇಂಡಸ್ಟ್ರಿಯ ಮಾಲಕರು ನಂದಳಿಕೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರು ಆದ ಶ್ರೀಯುತ ಸುಹಾಸ್ ಹೆಗಡೆ ಅವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಂಸ್ಕಾರ ಭಾರತಿ ರಾಜ್ಯ ಉಪಾಧ್ಯಕ್ಷರು, ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಶೆಟ್ಟಿ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯೆ, ಸನಾತನ ನಾಟ್ಯಾಲಯದ ಹಿರಿಯ ನೃತ್ಯ ಗುರುಗಳಾದ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾ ಮಣಿಶೇಖರ್ ಮತ್ತು ವರ್ಧಮಾನ ಶಿಕ್ಷಣ ಸಂಸ್ಥೆ ಕಾರ್ಕಳ ಇದರ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಹೆಗಡೆ ಅವರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುವರ್ಣ ಆರ್ಟ್ಸ್ ಮಾಲೀಕರಾದ ತುಳುನಾಡ ವೈಭವ ಖ್ಯಾತಿಯ ಚಂದ್ರಶೇಖರ ಸುವರ್ಣ ಅವರು ಹಾಡಿನ, ಸಾಹಿತ್ಯದ ಹಾಗೂ ಕಲೆಯ ದಾಖಲೀಕರಣದ ಮಹತ್ವ ಹಾಗೂ ತಂತ್ರಜ್ಞಾನದೊಂದಿಗೆ ಯುವ ಕಲಾವಿದರ ಜುಗಲ್ಬಂದಿಯ ಬಗ್ಗೆ ವಿವರವಾಗಿ ತಿಳಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಪ್ರೇಮ ಜನಾರ್ದನ ಶಾಂತಿ ಹಾಗೂ ಶ್ರೀಮತಿ ಶಾರದಾ ಮಣಿ ಶೇಖರ್ ಅವರು ನಡೆಸಿಕೊಟ್ಟರು.
ಶೌರ್ಯ ಸಿಂಪೋನಿಯ ಸುಧೀಂದ್ರ ಜನಾರ್ಧನ ಶಾಂತಿ ಹಾಗೂ ರಮ್ಯ ಸುಧೀಂದ್ರ ಅವರು ಉಪಸ್ಥಿತರಿದ್ದರು.