ಬೆಂಗಳೂರಿನ ಪ್ರತಿಷ್ಠಿತ ಕಲಾ ಸಂಸ್ಥೆ ಇಂಟರ್‌ನ್ಯಾಶನಲ್ ಆರ್ಟ್ಸ್ ಆ‍್ಯಂಡ್ ಕಲ್ಚರಲ್ ಫೌಂಡೇಶನ್ ವತಿಯಿಂದ ಕೇಂದ್ರ ಸಂಸ್ಕೃತಿ ಸಚಿವಾಲಯ, ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಖ್ಯಾತ ಕಲಾ ಪ್ರವರ್ತಕ ಶ್ರೀವತ್ಸ ಶಾಂಡಿಲ್ಯ ಅವರ ನೇತೃತ್ವದಲ್ಲಿ ಶ್ರೀರಾಮ ನೃತ್ಯ ನಮನ ಕಾರ್ಯಕ್ರಮವು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ‘ಶ್ರೀ ರಾಮ ತೋಡೆಯಂ ಮಂಗಲ’ ನೃತ್ಯ ನಮನ ನಡೆಯಿತು. ಈ ಸಂದರ್ಭದಲ್ಲಿ ವಿದೂಷಿ ಶಾರದಾ ಮಣಿ ಶೇಖರ್ ಹಾಗೂ ವಿದೂಷಿ ಶ್ರೀಲತಾ ನಾಗರಾಜ್ ಅವರು ಉಪಸ್ಥಿತರಿದ್ದರು.