ಸನಾತನ ನಾಟ್ಯಾಲಯ ವತಿಯಿಂದ ಜ. 11 ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಸನಾತನ ನೃತ್ಯ ಪ್ರೇರಣ’ ಕಾರ್ಯಕ್ರಮವು ನಡೆಯಿತು. ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಪಿ. ಎಸ್. ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದರು. ಧರ್ಮಸ್ಥಳ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಡಿತ್ತಾಯ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
2019 ರ ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆ ಪೂರೈಸಿದ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಾದ ವಿದುಷಿಯರಾದ ರಜನಿ ವರುಣ್ ಗೋರೆ, ಸಂಧ್ಯಾ ಬಿ., ಪ್ರತಿಭಾ ಎ. ಕುಮಾರ್, ಪ್ರೀತಿ ಮುತ್ತಪ್ಪ, ನಿಧಿ ಎಸ್. ಶೆಟ್ಟಿ, ಅರ್ಪಿತಾ, ಶ್ರವಣ ಕುಮಾರಿ ಅವರನ್ನು ಅಭಿನಂದಿಸಲಾಯಿತು. ನಂತರ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಶಿಷ್ಯೆಯರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.
Click to View More Photos