Sanathana Natyalaya

ಜುಲೈ 27 ರಂದು ಪುರಭವನದಲ್ಲಿ ಸನಾತನ ಗುರುಪರಂಪರ

ಮಂಗಳೂರಿನ ಸನಾತನ ನಾಟ್ಯಾಲಯದ ಆಶ್ರಯದಲ್ಲಿ ಜುಲೈ 27 ನೇ ಶನಿವಾರ ಸಂಜೆ 6 ಗಂಟೆಗೆ ಕುದ್ಮುಲ್ ರಂಗರಾವ್ ಪುರಭವನದಲ್ಲಿ “ಸನಾತನ ಗುರುಪರಂಪರ” ಕಾರ್ಯಕ್ರಮದಲ್ಲಿ ಕೀರ್ತಿಶೇಷ ಸಂಗೀತ ವಿದ್ವಾನ್ ಬಿ. ನರಸಿಂಹ ರಾವ್ ಇವರ ಗುರುಸ್ಮರಣೆ, ಹಿರಿಯ ಯಕ್ಷಗಾನ ಕಲಾವಿದರಾದ ಕುಂಬ್ಳೆ ಸುಂದರ ರಾವ್ ಇವರಿಗೆ ಗುರುನಮನ, ಶಾರದಾ ನಾಟ್ಯಾಲಯ ಹೊಸಬೆಟ್ಟು ಇದರ ನೃತ್ಯಗುರುಗಳಾದ ವಿದುಷಿ ಭಾರತಿ ಸುರೇಶ್‌ರವರಿಗೆ ಗುರುಪ್ರೇರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Click to view more Photos

Photos of Sanatana Guru Parampara 2019

Invitation

ಮಂಗಳೂರಿನ ಸನಾತನ ನಾಟ್ಯಾಲಯದ ಆಶ್ರಯದಲ್ಲಿ ಜುಲೈ 27 ನೇ ಶನಿವಾರ ಸಂಜೆ 6 ಗಂಟೆಗೆ ಕುದ್ಮುಲ್ ರಂಗರಾವ್ ಪುರಭವನದಲ್ಲಿ “ಸನಾತನ ಗುರುಪರಂಪರ” ಕಾರ್ಯಕ್ರಮದಲ್ಲಿ ಕೀರ್ತಿಶೇಷ ಸಂಗೀತ ವಿದ್ವಾನ್ ಬಿ. ನರಸಿಂಹ ರಾವ್ ಇವರ ಗುರುಸ್ಮರಣೆ, ಹಿರಿಯ ಯಕ್ಷಗಾನ ಕಲಾವಿದರಾದ ಕುಂಬ್ಳೆ ಸುಂದರ ರಾವ್ ಇವರಿಗೆ ಗುರುನಮನ, ಶಾರದಾ ನಾಟ್ಯಾಲಯ ಹೊಸಬೆಟ್ಟು ಇದರ ನೃತ್ಯಗುರುಗಳಾದ ವಿದುಷಿ ಭಾರತಿ ಸುರೇಶ್‌ರವರಿಗೆ ಗುರುಪ್ರೇರಣಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗಾನಶ್ರೀ ಸಂಗೀತ ವಿದ್ಯಾಲಯದ ಗುರುಗಳಾದ ವಿದುಷಿ ಶ್ರೀಮತಿ ಶೀಲಾ ದಿವಾಕರ್‌ವರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಂಸ್ಮರಣಾ ಭಾಷಣ ಮಾಡಲಿದ್ದಾರೆ.

ಸನಾತನ ನಾಟ್ಯಾಲಯದ ನೃತ್ಯಗುರುಗಳಾದ ವಿದುಷಿ ಶಾರದಾ ಮಣಿಶೇಖರ್ ಮತ್ತು ಶ್ರೀಲತಾ ನಾಗರಾಜ್ ಇವರ ನೃತ್ಯ ನಿರ್ದೇಶನದಲ್ಲಿ ವಿದುಷಿಯರಾದ ಶ್ರೀಮತಿ ಸಂಜನಾ ಭರತ್, ದೀಪ್ತಿ ಭರಣೀಕರ್, ಸ್ವರ್ಣಗೌರಿ ಜೋಶಿ, ಭಾಗ್ಯಶ್ರೀ ಶೆಟ್ಟಿ, ಅಂಜನಾ ಟಿ.ವಿ., ವಾಣಿಶ್ರೀ ವಿ., ಶ್ರೀಮತಿ ಪ್ರತಿಭಾ ಕುಮಾರ್ ಮತ್ತಿತರರಿಂದ ಭರತನಾಟ್ಯ ಪ್ರದರ್ಶನ ನಡೆಯಲಿಕ್ಕಿದೆ. ನಟುವಾಂಗದಲ್ಲಿ ವಿದುಷಿ ಶಾರದಾಮಣಿ ಶೇಖರ್, ಹಾಡುಗಾರಿಕೆ ಶರತ್ ಕುಮಾರ್, ಮೃದಂಗ ರಾಕೇಶ್ ಹೊಸಬೆಟ್ಟು, ಕೊಳಲಿನಲ್ಲಿ ಅಭಿಷೇಕ್ ಎಂ.ಬಿ. ಭಾಗವಹಿಸಲಿದ್ದಾರೆ.

Media Reports

Testimonials

For the sustenance and propagation of the Indian classical dance form – Bharathanatyam, Sanathana natyalaya is striving hard to its fullest potential. The need of spreading this dance form to...

Vidushi Artha Perla