ಸನಾತನ ನಾಟ್ಯಾಲಯದಲ್ಲಿ 13-8-2018 ರಂದು ಆಟಿಡೊಂಜಿ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಶೆಟ್ಟಿ ಹಾಗೂ ನೃತ್ಯ ಗುರು ಶ್ರೀಮತಿ ಶಾರದಾಮಣಿ ಚಂದ್ರಶೇಖರ್ ಉಪಸ್ಥಿತರಿದ್ದರು. ಶ್ರೀಮತಿ ರತ್ನಾವತಿ ಬೈಕಾಡಿ ಅವರಿಂದ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಆಷಾಢ ಮಾಸದ ವಿಶೇಷತೆಯನ್ನು ಅರಿತು ಆಟಿಯ ವಿಶೇಷ ಖಾದ್ಯಗಳನ್ನು ಸವಿಯುತ್ತ ಸಾಂಸ್ಕೃತಿಕ ಕಾರ್ಯಕ್ರಮದ ಸೊಬಗನ್ನು ಆಸ್ವಾದಿಸಲಾಯಿತು.