ನಮಗೆ ಜನ್ಮ ಕೊಟ್ಟ ತಾಯಿಯನ್ನು ನಾವು ದೇವರೆಂದು ಪೂಜಿಸುತ್ತೇವೆ. ಅದೇ ರೀತಿ ನಮ್ಮ ಜನ್ಮಭೂಮಿ ಭಾರತ ಕೂಡ ನಮಗೆ ದೇವರು. ಇಂತಹ ಬಾರತಮಾತೆಯ ಮಡಿಲಲ್ಲಿ ಜನ್ಮ ಪಡೆದ ನಾವೇ ಧನ್ಯರು ಎಂದು ಕಾರ್ಕಳದ ಅಕ್ಷಯಾ ಗೋಖಲೆ ಹೇಳಿದರು. 22-7-2018 ರಂದು ಸನಾತನ ನಾಟ್ಯಾಲಯ ಸಭಾಂಗಣದಲ್ಲಿ ನಡೆದ ಭಾರತಮಾತಾ ಪೂಜನ ಮತ್ತು ಮಾತೃವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಸ್ಕಾರ ಭಾರತಿಯ ಪುತ್ತೂರು ಜಿಲ್ಲಾ ಸಂಚಾಲಕರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರ ಮಾರ್ಗದರ್ಶನದಲ್ಲಿ ನಾಟ್ಯಾಲಯದ ವಿದ್ಯಾರ್ಥಿಗಳು ತಮ್ಮ ತಾಯಿಯ ಪಾದಪೂಜೆ ಮಾಡಿದರು. ಕಾರ್ಕಳದ ಸಮಾಜಸೇವಕಿ ಜ್ಯೋತಿ ಜೆ. ಪೈ. ಅವರಿಗೆ ನೃತ್ಯಗುರು ಶಾರದಾಮಣಿ ಶೇಖರ್ ಮಾತೃವಂದನ ಸಲ್ಲಿಸಿದರು.
ಡಾ. ಅರುಣಾ ಕಲ್ಕೂರ ಮತ್ತು ಡಾ. ಮಂಜುಳಾ ಅನಿಲ್ ರಾವ್ ಅವರನ್ನು ಅಭಿನಂದಿಸಲಾಯಿತು. ನಿರ್ದೇಶಕ ಚಂದ್ರಶೇಖರ್ ಶೆಟ್ಟಿ ನೃತ್ಯಗುರು ಶ್ರೀಲತಾ ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು.
ಹೆಚ್ಚಿನ ಫೋಟೋಗಳಿಗೆ ಲಿಂಕ್ ಕ್ಲಿಕ್ ಮಾಡಿ
ಮಾಧ್ಯಮ ವರದಿಗಳು
ಆಮಂತ್ರಣ